Saturday, June 13, 2026
Homeತಾಜಾ ಸುದ್ದಿಕಪ್ಪೆ ಹೊಟ್ಟೆಯಲ್ಲಿ ಫಳಫಳ ಹೊಳೆಯುತ್ತೆ ಲೈಟ್, ಬೆಳಕಿನ ಹಿಂದಿನ ರಹಸ್ಯಕ್ಕೆ ಕೊನೆಗೂ ಸಿಕ್ತು ಉತ್ತರ

ಕಪ್ಪೆ ಹೊಟ್ಟೆಯಲ್ಲಿ ಫಳಫಳ ಹೊಳೆಯುತ್ತೆ ಲೈಟ್, ಬೆಳಕಿನ ಹಿಂದಿನ ರಹಸ್ಯಕ್ಕೆ ಕೊನೆಗೂ ಸಿಕ್ತು ಉತ್ತರ

- Advertisement -
- Advertisement -

ಎಲ್ಲರ  ಮೊಬೈಲ್‍ನಲ್ಲೂ ಇದೀಗ ಕಪ್ಪೆ ಹೊಟ್ಟೆಯಲ್ಲಿ ಲೈಟ್ ಉರಿಯುತ್ತಿರುವ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಕಪ್ಪೇ ಏನು ಲೈಟ್ ನುಂಗಿದಿಯಾ?  ಕಪ್ಪೆ ಹೊಟ್ಟೆಯಲ್ಲಿ ಉರಿಯುತ್ತಿರುವ ಲೈಟ್ ಎಲ್ಲಿಂದ ಬಂತು ಹೀಗೆ ಹತ್ತಾರು ಪ್ರಶ್ನೆಗಳು ನೆಟ್ಟಿಗರ ತಲೆಯಲ್ಲಿ ಓಡಾಡುತ್ತಿದೆ. ಇಂತಹ ಪ್ರಶ್ನೆಗಳಿಗೆ ಇದೀಗ ಉತ್ತರ ಸಿಕ್ಕಿದೆ.

ಯೆಸ್… 14 ಸೆಕೆಂಡ್ ಅವಧಿಯ ಈ ವಿಡಿಯೋದಲ್ಲಿ ಕಪ್ಪೆಯೊಂದು ಗೋಡೆಯೊಂದರ ಮೇಲೆ ಅಂಟಿಕೊಂಡಿದೆ. ಕೆಲವೇ ಸೆಕೆಂಡ್‍ಗಳ ಬಳಿಕ ಅದರ ಹೊಟ್ಟೆಯಿಂದ ಬೆಳಕು ಬರುತ್ತೆ. ಮತ್ತೆ ಮಾಯವಾಗುತ್ತೆ. ಒಂದು ನಿಯಮಿತ ಅಂತರದಲ್ಲಿ ಈ ಬೆಳಕು ಪುನಃ ಕಾಣಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಕಪ್ಪೆ ಹೊಟ್ಟೆಯಲ್ಲಿರೋ ಲೈಟ್ ಕೀಟ. ಕಪ್ಪೆ ಹಸಿವೆಯಿಂದ ಬೆಳಕಿನ ಕೀಟವನ್ನು ನುಂಗಿದೆ. ಆದ್ರೇ, ಅದನ್ನು  ಜೀರ್ಣಿಸಿಕೊಳ್ಳಲು ಸಾಧ್ಯವಾಗಿಲ್ಲ. ಅದು ಕಪ್ಪೆ ಹೊಟ್ಟೆಯಿಂದ ಹೊರಬರಲು ಪ್ರಯತ್ನಿಸಿದಾಗ ಕಪ್ಪೆ ಹೊಟ್ಟೆಯಿಂದ ಬೆಳಕು ಚಿಮ್ಮುತ್ತದೆ. ಇದೇ ಇದರ ಅಸಲಿಯತ್ತು.

ಈ ವಿಡಿಯೋ ಇದೀಗ ವೈರಲ್ ಆಗುತ್ತಿದೆ.  ಸೆಪ್ಟೆಂಬರ್ 11 ರಂದು ಟ್ವೀಟ್ ಮಾಡಲಾಗಿರುವ ಈ ವಿಡಿಯೋವನ್ನು ಇದುವರೆಗೆ 84 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ.

- Advertisement -

Latest News

error: Content is protected !!