Saturday, June 6, 2026
Homeತಾಜಾ ಸುದ್ದಿಡ್ರಗ್ಸ್ ಕೇಸ್: ನಟಿ ರಾಗಿಣಿ ಗೆಳೆಯ ರವಿಶಂಕರ್ ನನ್ನು ಸರ್ಕಾರಿ ಹುದ್ದೆಯಿಂದ ಅಮಾನತು

ಡ್ರಗ್ಸ್ ಕೇಸ್: ನಟಿ ರಾಗಿಣಿ ಗೆಳೆಯ ರವಿಶಂಕರ್ ನನ್ನು ಸರ್ಕಾರಿ ಹುದ್ದೆಯಿಂದ ಅಮಾನತು

- Advertisement -
- Advertisement -

ಬೆಂಗಳೂರು: ಡ್ರಗ್ಸ್ ದಂಧೆ ಪ್ರಕರಣದಲ್ಲಿ ಭಾಗಿಯಾಗಿ, ಸಿಸಿಬಿ ಪೊಲೀಸರಿಂದ ಬಂಧನಕ್ಕೊಳಗಾಗಿರುವ ಜಯನಗರ ಆರ್ ಟಿ ಒ ಕಚೇರಿಯಲ್ಲಿ ಎಸ್ ಡಿ ಎ ಆಗಿ ಕಾರ್ಯನಿರ್ವಹಿಸುತ್ತಿದ್ದಂತ ನಟಿ ರಾಗಿಣಿ ಗೆಳೆಯ ಬಿಕೆ ರವಿಶಂಕರ್ ಅವರನ್ನು ಅಮಾನತುಗೊಳಿಸಿ ಸಾರಿಗೆ ಇಲಾಖೆ ಅಧಿಕೃತವಾಗಿ ಆದೇಶ ಹೊರಡಿಸಿದೆ.

ಈ ಕುರಿತಂತೆ ಸಾರಿಗೆ ಆಯುಕ್ತರು ಹಾಗೂ ಶಿಸ್ತು ಪ್ರಾಧಿಕಾರಿಗಳಾದಂತ ಎನ್ ಶಿವಕುಮಾರ್ ಅವರು, ದಿನಾಂಕ 03-09-2020ರಿಂದ ಎಸ್ ಡಿ ಎ ಬಿ.ಕೆ.ರವಿಶಂಕರ್ ಅವರು ಕರ್ತವ್ಯಕ್ಕೆ ಗೈರು ಹಾಜರಾಗಿರುತ್ತಾರೆ. ಇವರ ಬಗ್ಗೆ ದೃಶ್ಯಮಾಧ್ಯಗಳು, ಪತ್ರಿಕೆಗಳಲ್ಲಿ ವರದಿ ಪ್ರಸಾರವಾಗಿದ್ದು, ಅಪರಾಧ ದಳದ ಅಧಿಕಾರಿಗಳಿಂದ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿರುವುದಾಗಿ ತಿಳಿದು ಬಂದಿರುತ್ತದೆ.

ಒಬ್ಬ ಸರ್ಕಾರಿ ನೌಕರರಾಗಿ ಜವಾಬ್ದಾರಿಯುತವಾಗಿ ನಡೆದುಕೊಂಡಿಲ್ಲ. ಹೀಗಾಗಿ ಅವರ ಬಗ್ಗೆ ವಿಚಾರಣೆ ಬಾಕಿ ಉಳಿಸಿ, ಅಮಾನತುಗೊಳಿಸಲಾಗಿದೆ ಎಂಬುದಾಗಿ ಆದೇಶಿಸಿದ್ದಾರೆ.

- Advertisement -

Latest News

error: Content is protected !!