Thursday, June 4, 2026
Homeಕರಾವಳಿದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ, ಉಡುಪಿಯಲ್ಲಿ 187 ಮಂದಿ ಕೋವಿಡ್ ಸೋಂಕು

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ರಣಕೇಕೆ, ಉಡುಪಿಯಲ್ಲಿ 187 ಮಂದಿ ಕೋವಿಡ್ ಸೋಂಕು

- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಬರೋಬ್ಬರಿ 428 ಮಂದಿ ಕೊರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟು ಕೇಸುಗಳ ಸಂಖ್ಯೆ 14,223ಕ್ಕೇರಿದೆ. ಇನ್ನು ಇಂದು ಕೊರೊನಾಗೆ 7 ಮಂದಿ ಬಲಿಯಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2,904 ಸಕ್ರಿಯ ಪ್ರಕರಣಗಳಿದ್ದು,10,928 ಮಂದಿ ಗುಣಮುಖರಾಗಿದ್ದಾರೆ. ಇಂದು 222 ಮಂದಿ ಡಿಸ್ಚಾರ್‌ ಆಗಿದ್ದು, ಇದುವರೆಗೂ ಕೊರೊನಾಗೆ 389 ಮಂದಿ ಬಲಿಯಾಗಿದ್ದಾರೆ.

ಉಡುಪಿಯಲ್ಲಿ ಇಂದು 187 ಹೊಸ ಕೇಸುಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆ 12,343ಕ್ಕೇರಿದೆ. ಸದ್ಯ ಜಿಲ್ಲೆಯಲ್ಲಿ 2,107 ಸಕ್ರಿಯ ಪ್ರಕರಣಗಳಿದ್ದು,10,129 ಮಂದಿ ಗುಣಮುಖರಾಗಿದ್ದಾರೆ. ಇಂದು 332 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಇಬ್ಬರು ಕೊರೊನಾಗೆ ಬಲಿಯಾಗೋದರೊಂದಿಗೆ ಇದುವರೆಗೂ ಸಾವನ್ನಪ್ಪಿದವರ ಸಂಖ್ಯೆ 107ಕ್ಕೇರಿದೆ.

- Advertisement -

Latest News

error: Content is protected !!