Thursday, June 4, 2026
Homeತಾಜಾ ಸುದ್ದಿರಾಗಿಣಿ- ಸಂಜನಾ ಈಗ ಜೈಲುಮೇಟ್ ಗಳು: ರಾತ್ರಿಯಿಡೀ ಗುಸುಗುಸು ಮಾಡನಾಡುತ್ತಾ ಸಮಯ ಕಳೆದ ಗೆಳತಿಯರು

ರಾಗಿಣಿ- ಸಂಜನಾ ಈಗ ಜೈಲುಮೇಟ್ ಗಳು: ರಾತ್ರಿಯಿಡೀ ಗುಸುಗುಸು ಮಾಡನಾಡುತ್ತಾ ಸಮಯ ಕಳೆದ ಗೆಳತಿಯರು

- Advertisement -
- Advertisement -

ಬೆಂಗಳೂರು : ನಿನ್ನೆಯಷ್ಟೇ ನಟಿ ಸಂಜನಾ ಅವರನ್ನು 2 ದಿನಗಳ ನ್ಯಾಯಾಂಗ  ಬಂಧನ ವಿಧಿಸಿ ಅವರನ್ನು ಪರಪ್ಪನ ಅಗ್ರಹಾರಕ್ಕೆ ಶಿಫ್ಟ್ ಮಾಡಲಾಗಿದೆ. ಈಗಾಗಲೇ ನಟಿ ರಾಗಿಣಿ ಜೈಲಿನಲ್ಲಿ 4 ದಿನಗಳನ್ನು ಕಳೆದಿದ್ದಾರೆ. ಇನ್ನು ಜೈಲಿಗೆ ಎಂಟ್ರಿ ಕೊಡುತ್ತಲೇ ನಟಿ ಸಂಜನಾ ಖ್ಯಾತೆ ತೆಗಿದಿದ್ದಾರೆ. ಜೈಲಿನ ಬಾಗಿಲು ಚಿಕ್ಕದು ನಾನು ಹೋಗಲ್ಲ ಅಂತಾ  ಕಿರಿಕ್ ಮಾಡಿದ್ರು. ಆದರೆ ಅವರ ಮಾತು ಕೇಳೋರು ಯಾರು? ಮರು ಮಾತನಾಡದೇ ಒಳಗೆ ಹೋದ್ರು.

ಇನ್ನು ನಿನ್ನೆ ರಾಗಿಣಿ ಹಾಗೂ  ಸಂಜನಾ ಅವರನ್ನು ಒಂದೇ ಕೊಠಡಿಯಲ್ಲಿ ಇರಿಸಲಾಗಿತ್ತು. ಜೈಲಿಗೆ ಬಂದ ಕೆಲ ಹೊತ್ತು ಮೌನಕ್ಕೆ ಶರಣಾದ ಸಂಜನಾ  ಬಳಿಕ ರಾಗಿಣಿ ಜೊತೆ ಗುಸುಗುಸು ಮಾತನಾಡೋದಕ್ಕೆ ಶುರು ಮಾಡಿದ್ರು ಅನ್ನೋ ಮಾಹಿತಿ ಲಭ್ಯವಾಗಿದೆ. ಇನ್ನು ರಾಗಿಣಿ  ಹೆತ್ತವರು ಕಳೆದ ಎರಡು ದಿನಗಳಿಂದ ರಾಗಿಣಿ ಭೇಟಿಗೆ ಯತ್ನಿಸುತ್ತಿದ್ದ ಜೈಲಾಧಿಕಾರಿಗಳು ಅವಕಾಶ ಕಲ್ಪಿಸಿಲ್ಲ . ಹಾಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂದು ತೆರಳಿದ್ದಾರೆ ತುಪ್ಪದ ಬೆಡಗಿಯ ಪೋಷಕರು. ಇನ್ನು ಇಂದು ರಾಗಿಣಿಯ ವಕೀಲರು ಸಂಜೆ ಆಕೆಯನ್ನು ಭೇಟಿಯಾಗುವಂತಹ ಸಾಧ್ಯತೆ ಇದೆ.

- Advertisement -

Latest News

error: Content is protected !!