Thursday, June 4, 2026
Homeತಾಜಾ ಸುದ್ದಿಮೊಬೈಲ್ ಬಳಕೆದಾರರೇ ಎಚ್ಚರ ! ಯುವಕನ ಜೇಬಿನಲ್ಲೇ ಬ್ಲಾಸ್ಟ್ ಆಯ್ತು ಜಂಗಮವಾಣಿ...

ಮೊಬೈಲ್ ಬಳಕೆದಾರರೇ ಎಚ್ಚರ ! ಯುವಕನ ಜೇಬಿನಲ್ಲೇ ಬ್ಲಾಸ್ಟ್ ಆಯ್ತು ಜಂಗಮವಾಣಿ…

- Advertisement -
- Advertisement -

ಶಿವಮೊಗ್ಗ : ಮೊಬೈಲ್ ಎಷ್ಟು ಉಪಕಾರಿಯೋ ಹಾಗೇ ಕಲವೊಮ್ಮೆ ಅದು ಅಷ್ಟೇ ಡೆಂಜರಸ್ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ಯುವಕನೊಬ್ಬ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಜೇಬಿನಲ್ಲಿದ್ದ ಮೊಬೈಲ್ ಬ್ಲಾಸ್ಟ್ ಆಗಿ ಆಸ್ಪತ್ರೆ ಸೇರಿದ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಬಳಿ ನಡೆದಿದೆ.

ತವನಂದಿಯ 22 ವರ್ಷದ ಶರತ್ ಗಾಯಗೊಂಡ ಯುವಕನಾಗಿದ್ದು, ಈತ ಬೈಕಿನಲ್ಲಿ ಕುಪ್ಪಗಡ್ಡೆಗೆ ತೆರಳುತ್ತಿದ್ದ ವೇಳೆ ಜೇಬಿನಲ್ಲಿದ್ದ ಮೊಬೈಲ್ ಸ್ಪೋಟಗೊಂಡಿದೆ. ಇದರಿಂದ ಗಾಬರಿಗೊಂಡ ಶರತ್ ನಿಯಂತ್ರಣ ಕಳೆದುಕೊಂಡು ಬೈಕಿನ ಸಮೇತ ಕೆರೆಗೆ ಬಿದ್ದಿದ್ದು, ಬಲ ತೊಡೆ ಭಾಗದಲ್ಲಿ ಗಾಯವಾಗಿದೆ. ಆತನನ್ನು ಸೊರಬ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

- Advertisement -

Latest News

error: Content is protected !!