Monday, May 13, 2024
Homeಮನರಂಜನೆಯಾವ ಎಕ್ಸಾಂಗೆ ರೆಡಿಯಾಗುತ್ತಿದ್ದಾಳೆ ಯಶ್ ಮಗಳು? ಅಂದ್ಹಾಗೆ ಐರಾಗೆ ಪುಸ್ತಕ ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ?

ಯಾವ ಎಕ್ಸಾಂಗೆ ರೆಡಿಯಾಗುತ್ತಿದ್ದಾಳೆ ಯಶ್ ಮಗಳು? ಅಂದ್ಹಾಗೆ ಐರಾಗೆ ಪುಸ್ತಕ ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ?

spot_img
- Advertisement -
- Advertisement -

ಬೆಂಗಳೂರು : ನಟಿ ರಾಧಿಕಾ ಪಂಡಿತ್ ಅವರು ತಮ್ಮ ಮಗಳು ಐರಾ ಯಶ್ ಬಗ್ಗೆ ಆಗಾಗ್ಗೆ ಏನಾದರೂ ಅಪಡೇಟ್ಸ್ ಕೊಡ್ತಾನೆ ಇರ್ತಾರೆ. ಇದೀಗ ರಾಧಿಕಾ ತಮ್ಮ ಮಗಳು ಐರಾ ಯಶ್ ಳ ಅತ್ಯಂತ ಸ್ಪೆಷಲ್ ಆದ ಪೋಟೋ ಒಂದನ್ನು ಶೇರ್ ಮಾಡಿದ್ದಾರೆ. ಮುದ್ದು ಐರಾ ಗಂಭೀರವಾಗಿ ಪುಸ್ತಕವೊಂದನ್ನು ಓದುತ್ತಿರುವ ಫೋಟೋವನ್ನು ರಾಧಿಕಾ ಶೇರ್ ಮಾಡಿದ್ದಾರೆ.

ಈ ಪೋಸ್ಟ್ ನಲ್ಲಿ ರಾಧಿಕಾ ಒಂದೆರಡು ಸಾಲುಗಳನ್ನು ಕೂಡ ಬರೆದಿದ್ದಾರೆ. “ನಾನು ನನ್ನ ಪರೀಕ್ಷಾ ದಿನಗಳಲ್ಲೂ ಇಷ್ಟೊಂದು ಕಷ್ಟಪಟ್ಟು ಓದಿರಲಿಲ್ಲ. ನಾನು ಅವಳನ್ನು ಫೋನ್, ಹಾಗೂ ಟಿವಿಯಿಂದ ದೂರ ಇರುವಂತೆ ಸಿದ್ಧಳಾಗಿಸುತ್ತಿದ್ದೇನೆ. ಪುಸ್ತಕಗಳಿಂದ ಅವಳು ಖುಶಿಯಾಗಿರುವಂತೆ ನೋಡಿಕೊಳ್ಳುತ್ತಿದ್ದೇನೆ. ಈ ಮೂಲಕ ಅವಳು ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವಂತೆ ಮಾಡುತ್ತಿದ್ದೇನೆ. ಖಂಡಿತವಾಗಿಯೂ ಈಗ ಅವಳಿಗೆ ಓದುವುದಕ್ಕೆ ಗೊತ್ತಾಗುವುದಿಲ್ಲ. ಆದರೆ ಅವಳು ಚಿತ್ರಗಳನ್ನು ನೋಡಿ ಖುಷಿ ಪಡುತ್ತಿದ್ದಾಳೆ” ಎಂದು ರಾಧಿಕಾ ಹೇಳಿದ್ದಾರೆ.

I haven't concentrated this hard even during exams!! ?I prefer giving her books instead of phones/television, to keep…

Posted by Radhika Pandit on Tuesday, 28 July 2020

ಅಂದ್ಹಾಗೆ ಐರಾ ಯಶ್ ಕೈಯಲ್ಲಿರುವ ಈ ಪುಸ್ತಕವನ್ನು ಆಕೆಗೆ ಗಿಫ್ಟ್ ಕೊಟ್ಟಿದ್ದು ಯಾರು ಗೊತ್ತಾ ಅನುಪ್ರಭಾಕರ್ ಹಾಗೇ ರಘು ಮುಖರ್ಜಿ ಪುತ್ರಿ ನಂದನಾ ಈ ಪುಸ್ತಕವನ್ನು ಐರಾಗೆ ಗಿಫ್ಟ್ ಕೊಟ್ಟಿದ್ದಾಳೆ. ರಾಧಿಕಾ ಮುದ್ದು ನಂದನಾಗೆ ಥ್ಯಾಂಕ್ಯೂ ಹೇಳಿದ್ದಾರೆ. ಹಾಗೇ ಐರಾ ಈ ಪುಸ್ತಕಗಳನ್ನು ಇಷ್ಟಪಟ್ಟಿದ್ದಾಳೆ ಅಂತಾ ರಾಧಿಕಾ ಪೋಸ್ಟ್ ಮೂಲಕ ಖುಷಿ ಹಂಚಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!