Sunday, May 19, 2024
Homeತಾಜಾ ಸುದ್ದಿಲಾಕ್ಡೌನ್ ಸಮಯದಲ್ಲೇ ಮನೆಯಲ್ಲೇ ಜೂಜಾಟ ನಡೆಸುತ್ತಿದ್ದ ಕನ್ನಡದ ನಟ !

ಲಾಕ್ಡೌನ್ ಸಮಯದಲ್ಲೇ ಮನೆಯಲ್ಲೇ ಜೂಜಾಟ ನಡೆಸುತ್ತಿದ್ದ ಕನ್ನಡದ ನಟ !

spot_img
- Advertisement -
- Advertisement -

ಚೆನ್ನೈ: ನಟಿ ರಮ್ಯಾ ಹಾಗೂ ರಕ್ಷಿತಾರಿಗೆ ಜೋಡಿಯಾಗಿ ‘ತನನಂ ತನನಂ’ ಚಿತ್ರದಲ್ಲಿ, ನಂತರ ಅರ್ಜುನ್ ಸರ್ಜಾರ ‘ಗೇಮ್’ ಚಿತ್ರದಲ್ಲಿ, ಹಾಗೆಯೆ ರಾಕಿಂಗ್​ ಸ್ಟಾರ್ ಯಶ್​ ಅಭಿನಯದ ‘ಸಂತು ಸ್ಟ್ರೈಟ್​ ಫಾರ್ವರ್ಡ್’​ ಚಿತ್ರದಲ್ಲಿ ಖದರ್​ ಖಳನಾಯಕನಾಗಿ ಮಿಂಚಿದ್ದ ಬಹುಭಾಷಾ ನಟ ಶ್ಯಾಮ್ ಅವರನ್ನು ಆನ್ಲೈನ್ ಜೂಜು ಅಡ್ಡೆ ನಡೆಸುತ್ತಿದ್ದ ಆರೋಪದಲ್ಲಿ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.

ಜೂಜಾಟದಲ್ಲಿ ಅಪಾರ ಆಸ್ತಿಯನ್ನು ಕಳೆದುಕೊಂಡ ತಮಿಳಿನ ಖ್ಯಾತ ನಟನೊಬ್ಬ ನೀಡಿದ ದೂರಿನನ್ವಯ ಶ್ಯಾಮ್ ನಡೆಸುತ್ತಿದ್ದ ಜೂಜು ಅಡ್ಡೆಯ ಮೇಲೆ ದಾಳಿ ಮಾಡಲಾಗಿದೆ. ದಾಳಿ ವೇಳೆ ಶ್ಯಾಮ್​ ಸೇರಿದಂತೆ 11 ಮಂದಿಯನ್ನು ಬಂಧಿಸಲಾಗಿದೆ.

ಚೆನ್ನೈನ ನುಂಗಂಬಾಕಂನಲ್ಲಿರುವ ಶ್ಯಾಮ್ ಅವರ ಅಪಾರ್ಟೆಮೆಂಟ್​ನಲ್ಲಿ ಜೂಜಾಟ ನಡೆಸುತ್ತಿದ್ದು, ತಪಾಸಣೆ ವೇಳೆ ಜೂಜಾಟಕ್ಕೆ ಬಳಸುತ್ತಿದ್ದ ವಸ್ತುಗಳು, ಟೋಕನ್​ಗಳು ಹಾಗೂ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಈ ದಂಧೆಯಲ್ಲಿ ತಮಿಳು ಚಿತ್ರರಂಗದ ಮತ್ತು ಚೆನ್ನೈಯಲ್ಲಿ ನೆಲೆಸಿರುವ ಪ್ರಖ್ಯಾತ ನಟ-ನಟಿಯರು ಸಹ ಭಾಗಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಸದ್ಯ ಶ್ಯಾಮ್​ ಬಂಧನವಾಗಿದ್ದು, ಇತರೆ ಕಲಾವಿದರು ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ಪದವಿಪೂರ್ವ ವಿದ್ಯಾರ್ಥಿಯೊಬ್ಬ ಆನ್‌ಲೈನ್ ಆಟದಲ್ಲಿ ತನ್ನ ಹಣವನ್ನು ಕಳೆದುಕೊಂಡ ಬಳಿಕ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಭಾರಿ ಸದ್ದು ಮಾಡಿದ ಬೆನ್ನಲ್ಲೇ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ.

- Advertisement -
spot_img

Latest News

error: Content is protected !!