Tuesday, May 7, 2024
Homeಪ್ರಮುಖ-ಸುದ್ದಿನಾಯಿ ಮರಿ ನೆಪದಲ್ಲಿ ಬಾಲಕನ ಕಿಡ್ಯ್ನಾಪ್, ಕೆಲವೇ ಗಂಟೆಗಳಲ್ಲಿ ಅಪಹರಣಕಾರರನ್ನು ಪೊಲೀಸರು ಪತ್ತೆ ಹಚ್ಚಿದ್ದು ಹೇಗೆ...

ನಾಯಿ ಮರಿ ನೆಪದಲ್ಲಿ ಬಾಲಕನ ಕಿಡ್ಯ್ನಾಪ್, ಕೆಲವೇ ಗಂಟೆಗಳಲ್ಲಿ ಅಪಹರಣಕಾರರನ್ನು ಪೊಲೀಸರು ಪತ್ತೆ ಹಚ್ಚಿದ್ದು ಹೇಗೆ ಗೊತ್ತಾ?

spot_img
- Advertisement -
- Advertisement -

ಬೆಂಗಳೂರು : ಆರೋಗ್ಯ ಸಮಸ್ಯೆ ಇರುವ ಕಾರಣ ಚಿಕಿತ್ಸೆ ಹಣಕ್ಕಾಗಿ ಕುಟುಂಬವೊಂದು ತಮ್ಮ ಮನೆಯಲ್ಲಿದ್ದ ಹೈಬ್ರೀಡ್ ನಾಯಿಯೊಂದನ್ನ ಮಾರಾಟಕ್ಕೆ ಮುಂದಾಗಿತ್ತು. ಆದರೆ, ನಾಯಿಯನ್ನ ಕೊಂಡುಕೊಳ್ಳುವ ನೆಪದಲ್ಲಿ ಬಂದವರು ಬಾಲಕನನ್ನೇ ಕಿಡ್ಯ್ನಾಪ್ ಮಾಡಿದ್ದರು. ಕಿಡ್ನ್ಯಾಪ್ ಆದ ಬಾಲಕನನ್ನ ಸಿನಿಮೀಯ ರೀತಿಯಲ್ಲಿ ಅರೆಸ್ಟ್ ಮಾಡಲಾಗಿದೆ.

ಬೆಂಗಳೂರಿನ ಬೈಲಕೊನೇನಹಳ್ಳಿ ನಿವಾಸಿಗಳಾದ ನಾಗರಾಜು ಮತ್ತು ರೇಣುಕಾ ದಂಪತಿಗಳು ಮಗ ನಿತಿನ್ ಚಿಕಿತ್ಸೆಗಾಗಿ ಹಣ ಹೊಂದಿಸಲು ಮನೆಯಲ್ಲಿದ್ದ ಹೈಬ್ರೀಡ್ ನಾಯಿಯೊಂದನ್ನ ಮಾರಲು ಮುಂದಾಗಿದ್ದರು. ನಾಯಿಯನ್ನು ಕೊಂಡುಕೊಳ್ಳುವ ಸೋಗಿನಲ್ಲಿ ಬಂದಿದ್ದ ಐದು ಜನ ದುಷ್ಕರ್ಮಿಗಳು ಬಾಲಕ ನಿತಿನ್‌ನನ್ನು ಕಿಡ್ಯ್ನಾಪ್ ಮಾಡಿದ್ದರು. ಈಗ ಅವರು ಸಿಕ್ಕಿ ಬಿದ್ದಿದ್ದಾರೆ. 

ನಾಯಿ ಮರಿಯನ್ನ ನಿತಿನ್ ಮಾರಾಟ ಮಾಡಲು ತನ್ನ ಸಹೋದರನೊಂದಿಗೆ ಹೋಗಿದ್ದ. ಮಾರಾಟವಾಗದೆ ವಾಪಸು ಬರುವಾಗ ಬೈಲಕೊನೇನಹಳ್ಳಿ ವೃತ್ತದಲ್ಲಿ ನಿಂತಿದ್ದಾಗ ಸ್ಥಳಕ್ಕೆ ಬಂದ ಅಪಹರಣಕಾರರು ನಾಯಿಮರಿ ಕೊಂಡುಕೊಳ್ಳುತ್ತೇವೆ ಎಂದು ಹತ್ತಿರಕ್ಕೆ ಕರೆದಿದ್ದಾರೆ. ನಾಯಿ ಮರಿ ಮಾರಾಟವಾಗುತ್ತೆ ಎಂಬ ಆಸೆಯಲ್ಲಿ ಇವರು ಹತ್ತಿರ ಹೋದರು. ಈ ವೇಳೆ ನಮ್ಮ ತಾಯಿಗೆ ನಾಯಿಯನ್ನ ತೋರಿಸಬೇಕು ಎಂದು ಅವರನ್ನು ಕಾರಿನಲ್ಲಿ ಕೂರಿಸಿಕೊಂಡು ಕಿಡ್ಯ್ನಾಪ್ ಮಾಡಲು ಮುಂದಾದರು.

ಮಾದನಾಯಕನಹಳ್ಳಿಯಿಂದ ನೆಲಮಂಗಲ ಹಾಸನ ರಸ್ತೆಯ ಲ್ಯಾಂಕೋ ಟೋಲ್​ ಬಳಿ ಬಂದಾಗ ಬಾಲಕ ಗಾಬರಿಗೊಂಡು ತನ್ನ ತಾಯಿಗೆ ಕರೆಮಾಡಿ, ಅಮ್ಮ ನನಗೆ ಗಾಬರಿಯಾಗುತ್ತಿದೆ ಎಂದಿದ್ದಾನೆ, ಕಿರುಚಾಡಿದ್ದಾನೆ. ಆಗ ಕಿಡ್ಯ್ನಾಪರ್ಸ್ ಬಾಲಕನ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ಕಡೆ ತಮ್ಮ ಕಾರು ತಿರುಗಿಸಿದ್ದಾರೆ. ಈ ವೇಳೆ ನಿತಿನ್ ತಾಯಿಗೆ ಕರೆ ಮಾಡಿ ನಿಮ್ಮ ಮಗನನ್ನು ಕಿಡ್ಯ್ನಾಪ್ ಮಾಡಿದ್ದೇವೆ, 20 ಲಕ್ಷ ಹಣ ಕೊಡಿ, ಇಲ್ಲವಾದರೆ ಕೈಕಾಲು ಮುರಿದು ಸಾಯಿಸುತ್ತೇವೆ ಎಂದು ಧಮ್ಕಿ ಹಾಕಿದ್ದಾರೆ.

ಗಾಬರಿಗೊಂಡ ಪೋಷಕರು ಮಾದನಾಯಕನಹಳ್ಳಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು , ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೊಬೈಲ್ ನೆಟ್ವರ್ಕ್ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಮುಂದಾದರು. ಆರೋಪಿಗಳ ಮೊಬೈಲ್ ನೆಟ್ವರ್ಕ್ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಮಾವನೂರು ಬಳಿ ತೋರಿಸಿದ್ದು, ಆರೋಪಿಗಳನ್ನ ಚೇಸ್ ಮಾಡಿದ ಪೊಲೀಸರು ಮವನೂರು ಬಳಿ ಬಂಧಿಸಿದ್ದಾರೆ.
ಬಂಧಿತರನ್ನ ಬೆಂಗಳೂರಿನ ಅಂದ್ರಹಳ್ಳಿ ಮೂಲದ ಮನು(24), ದರ್ಶನ್(20), ಲೋಕೇಶ್(20), ಆದರ್ಶ(20), ಆಕಾಶ್(20) ಎನ್ನಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಒಟ್ಟಾರೆ ಮೀಸೆ ಚಿಗುರಿ ಲೋಕ ಕಾಣುವ ಸಮಯದಲ್ಲಿ ಸಿನಿಮೀಯಾ ಶೈಲಿಯಲ್ಲಿ ಕಿಡ್ಯ್ನಾಪ್ ಮಾಡಿ ಹಣ ಮಾಡಲು ಹೋಗಿ, ಪೊಲೀಸರ ಸಿನಿಮೀಯಾ ಶೈಲಿಯ ಕಾರ್ಯಾಚರಣೆಯಲ್ಲೆ ಸಿಕ್ಕಿಬಿದ್ದಿದ್ದು ಜೈಲು ಪಾಲಾಗಿದ್ದಾರೆ.

- Advertisement -
spot_img

Latest News

error: Content is protected !!