Friday, June 5, 2026
Homeಕರಾವಳಿಮಂಗಳೂರುಕಡಬ; ತಂದೆ ಅಗಲಿಕೆಯ ನೋವಿನಿಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕಡಬ; ತಂದೆ ಅಗಲಿಕೆಯ ನೋವಿನಿಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ

- Advertisement -
- Advertisement -

ಕಡಬ; ತಂದೆ ಅಗಲಿಕೆಯ ನೋವಿನಿಂದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಳಿತೊಟ್ಟು ಗ್ರಾಮದ ಅನಾಲು ಎಂಬಲ್ಲಿ ನಡೆದಿದೆ.

ಕಡಬ ತಾಲೂಕಿನ ಗೋಳಿತೊಟ್ಟು ಗ್ರಾಮದ ಅನಾಲು ನಿವಾಸಿ ಶ್ರೀ ಹರ್ಷ(21) ಮೃತ ದುರ್ದೈವಿ. ಹರ್ಷ ತಂದೆ ವಾಸಪ್ಪ ಗೌಡ ಮೂರು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ಹರ್ಷ ಇದೇ ನೋವಿನಲ್ಲಿದ್ದರು ಎನ್ನಲಾಗಿದೆ.

 ಮೇ. 4 ರಂದು ಹರ್ಷ ಅವರ ಚಿಕ್ಕಪ್ಪನ ಮಗಳ ಮದುವೆ ಔತಣಕೂಟವಿತ್ತು.ಈ ಹಿನ್ನೆಲೆ ಸಂಜೆ ತನಕ ಅಲ್ಲಿ  ಕೆಲಸ ಮಾಡಿ ಮನೆ ಬಂದು ಹಂದಿಗೆ ವೇಸ್ಟೇಜ್ ತರಲು ಗೋಳಿತೊಟ್ಟಿಗೆ  ಹೋದಗಿ ಮನೆಗೆ ಬಂದು ಔತಣಕೂಟಕ್ಕೂ ಹೋಗದೇ ಮನೆಯಲ್ಲಿಯೇ ಇದ್ದರು. ಹರ್ಷ ಸಹೋದರ ಮಧ್ಯರಾತ್ರಿ  2-30ಕ್ಕೆ ಮನೆಗೆ ಬಂದು ನೋಡಿದಾಗ ಮನೆಯ ಬಾಗಿಲು ತೆರಿದಿತ್ತು ಎನ್ನಲಾಗಿದೆ.ಒಳಗೆ ಹೋಗಿ ನೋಡಿದಾಗ ಹರ್ಷ ಮನೆಯ ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ.

ಕೂಡಲೆ ಹಗ್ಗದಿಂದ ಇಳಿಸಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ 3-30 ರ ವೇಳೆಗೆ ವೈದ್ಯರು ಹರ್ಷ ಮೃತಪಟ್ಟಿರೋದಾಗಿ ತಿಳಿಸಿದ್ದಾರೆ.ಹ್ರಷ ಸಹೋದರ ಹರ್ಷಿತ್ ನೀಡಿದ ದೂರಿನಂತೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಹರ್ಷ ತಾಯಿ ಹಾಗೂ ಮೂವರು ಸಹೋದರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!