Sunday, April 28, 2024
Homeಕ್ರೀಡೆಆಸಿಸ್ ಬೌಲರ್​ಗಳ ಬೆವರಿಳಿಸಿದ ವಿಹಾರಿ, ಅಶ್ವಿನ್: ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ!

ಆಸಿಸ್ ಬೌಲರ್​ಗಳ ಬೆವರಿಳಿಸಿದ ವಿಹಾರಿ, ಅಶ್ವಿನ್: ಆಸ್ಟ್ರೇಲಿಯಾ ವಿರುದ್ಧ 3ನೇ ಟೆಸ್ಟ್ ಡ್ರಾನಲ್ಲಿ ಅಂತ್ಯ!

spot_img
- Advertisement -
- Advertisement -

ಸಿಡ್ನಿ: ಭಾರತ- ಆಸ್ಟ್ರೇಲಿಯಾ ನಡುವಿನ 3ನೇ ಟೆಸ್ಟ್​ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. ಹೀಗಾಗಿ ಎರಡು ತಂಡಗಳು 1-1 ರ ಸಮಬಲ ಸಾಧಿಸಿವೆ. ಸಿಡ್ನಿಯಲ್ಲಿ ನಡೆದ ಮೂರನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ 94 ರನ್​​ಗಳ ಮುನ್ನಡೆ ಸಾಧಿಸಿದ್ದ ಆಸ್ಟ್ರೇಲಿಯಾ, 2ನೇ ಇನ್ನಿಂಗ್ಸ್​ನಲ್ಲಿ 6 ವಿಕೆಟ್​ ಕಳೆದುಕೊಂಡು 312 ರನ್​​ಗಳಿಗೆ ಡಿಕ್ಲೇರ್​ ಮಾಡಿಕೊಂಡಿತ್ತು. 406​​​​​​​​​​​ ರನ್​​ಗಳ ಮುನ್ನಡೆ ಪಡೆದುಕೊಂಡಿದ್ದ ಕಾಂಗರೂ, ಟೀಮ್ ಇಂಡಿಯಾ ವಿರುದ್ಧ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು.

ಆದರೆ ಮೊದಲ ಹಂತದಲ್ಲಿ ಗೆಲುವಿನ ಲಯದಲ್ಲಿದ್ದ ಟೀಂ ಇಂಡಿಯಾ ರಿಶಭ್​ ಪಂತ್(97)​ ಹಾಗೂ ಚೇತೇಶ್ವರ್​ ಪೂಜಾರ(77) ವಿಕೆಟ್​ ಕಳೆದುಕೊಂಡ ಬಳಿಕ ಸುಳಿನ ಸುಳಿಗೆ ಸಿಲುಕಿಕೊಂಡಿತ್ತು. ಆದರೆ ಜವಬ್ದಾರಿಯುತ ಆಟಕ್ಕೆ ಮುಂದಾದ ಹನುಮ ವಿಹಾರಿ ಹಾಗೂ ರವಿಚಂದ್ರನ್​ ಅಶ್ವಿನ್​ ತಾಳ್ಮೆಯ ಆಟಕ್ಕೆ ಮುಂದಾದರು. ಆದರೆ ಬ್ಯಾಟಿಂಗ್​ನ ಆರಂಭದಲ್ಲೇ ಗಾಯದ ಸಮಸ್ಯೆಗೆ ಒಳಗಾದ ಹನುಮ ವಿಹಾರಿ ಮೈದಾನದಲ್ಲಿ ರನ್​ ಗಳಿಸಲು ಪರದಾಡಿದರು. ಹೀಗಾಗಿ ವಿಹಾರಿಗೆ ಉತ್ತಮ ಸಾಥ್​ ನೀಡಿದ ಅಶ್ವಿನ್​ ತಂಡವನ್ನು ಸೋಲಿನ ಸುಳಿಯಿಂದ ಪಾರು ಮಾಡಿದರು.

ಅಲ್ಲದೆ ಈ ಜೋಡಿ 256 ಬಾಲ್​ಗಳನ್ನ ಎದುರಿಸುವುದರಿಂದಿಗೆ 50 ರನ್​ಗಳ ಜೊತೆಯಾಟ ಆಡಿತು. ಅಂತಿಮವಾಗಿ 161 ಬಾಲ್​ ಎದುರಿಸಿದ ವಿಹಾರಿ 23 ರನ್​ ಗಳಿಸಿದರೆ, 128 ಬಾಲ್​ ಎದುರಿಸಿದ ಅಶ್ವಿನ್​ 33 ರನ್​ ಗಳಿಸಿ ಅಜೇಯರಾಗಿ ಉಳಿದರು. ಇದರೊಂದಿಗೆ ಟೀಮ್ ಇಂಡಿಯಾ ದಿನದಾಟದ ಅಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡು 334 ರನ್​ ಗಳಿಸಿತು. ಅಷ್ಟೇ ಅಲ್ಲ..! ಸಿಡ್ನಿ ಟೆಸ್ಟ್ ಪಂದ್ಯವನ್ನ ಡ್ರಾ ಮಾಡಿಕೊಂಡು, ಸರಣಿಯಲ್ಲಿ ಸಮಬಲ ಕಾಯ್ದುಕೊಂಡಿತು.

ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಉಭಯ ತಂಡಗಳು ತಲಾ 1 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಸಮಬಲ ಸಾಧಿಸಿದ್ದಾರೆ. ಇನ್ನು ಜನವರಿ 15ರಿಂದ ಆರಂಭಗೊಳ್ಳುವ ನಾಲ್ಕನೇ ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೆ ಅವರು ಟ್ರೋಫಿಗೆ ಮುತ್ತಿಡಲಿದ್ದಾರೆ.

- Advertisement -
spot_img

Latest News

error: Content is protected !!