Monday, May 6, 2024
Homeತಾಜಾ ಸುದ್ದಿಕ್ವಾರಂಟೈನ್​ ನಿಯಮದಲ್ಲಿ ಮತ್ತೆ ಬದಲಾವಣೆ: 14 ದಿನದ ಖಡಕ್ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ

ಕ್ವಾರಂಟೈನ್​ ನಿಯಮದಲ್ಲಿ ಮತ್ತೆ ಬದಲಾವಣೆ: 14 ದಿನದ ಖಡಕ್ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ

spot_img
- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲೀಗ ರಾಜ್ಯ ಸರಕಾರ ಕ್ವಾರಂಟೈನ್ ನಿಯಮದಲ್ಲಿ ಬದಲಾವಣೆಯನ್ನು ಮಾಡಲಾಗಿದ್ದು, ಹೊರ ರಾಜ್ಯಗಳಿಂದ ಬಂದವರಿಗೆ ಕಡ್ಡಾಯವಾಗಿ 14 ದಿನಗಳ ಕ್ವಾರಂಟೈನ್ ಮಾಡಲು ಸರಕಾರ ತೀರ್ಮಾನಿಸಿದೆ.
ಇತ್ತೀಚೆಗೆ ಕ್ವಾರಂಟೈನ್​ ನಿಯಮ ಸಡಿಲಗೊಳಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಹಾರಾಷ್ಟ್ರದಿಂದ ಬರುವವರಿಗೆ ಮಾತ್ರ 7 ದಿನ ಸಾಂಸ್ಥಿಕ ಕ್ವಾರಂಟೈನ್​ ಮತ್ತು 7 ದಿನ ಹೋಂ ಕ್ವಾರಂಟೈನ್​ಗೆ ಸೂಚಿಸಿತ್ತು. ಇತರ ರಾಜ್ಯದಿಂದ ಬರುವವರಿಗೆ 14 ದಿನಗಳ ಹೋಂ ಕ್ವಾರಂಟೈನ್​ಗೆ ಒಳಪಡಿಸಲಾಗುತ್ತಿತ್ತು. ಒಂದು ವೇಳೆ ದೊಡ್ಡ ಕುಟುಂಬವಿದ್ದು, ಮನೆ ಚಿಕ್ಕದಾಗಿದ್ದರೆ, ಕೊಳಗೇರಿ ಅಥವಾ ಕಿಕ್ಕಿರಿದ ಪ್ರದೇಶಗಳ ನಿವಾಸಿಯಾಗಿದ್ದು ಮನೆಯಲ್ಲಿ ಪ್ರತ್ಯೇಕ ಕ್ವಾರಂಟೈನ್​ ವ್ಯವಸ್ಥೆ ಸಾಧ್ಯವಾಗದವರನ್ನು ಮಾತ್ರ ಸಾಂಸ್ಥಿಕ ಕ್ವಾರಂಟೈನ್​ಗೆ ಸೂಚಿಸಲಾಗುತ್ತಿತ್ತು. ಈಗ ಹೊರ ರಾಜ್ಯದಿಂದ ಬರುವವರಿಗೆ 14 ದಿನ ಕ್ವಾರಂಟೈನ್​ ಕಡ್ಡಾಯ ಮಾಡಲಾಗಿದೆ.
ಕೇವಲ ಮಹಾರಾಷ್ಟ್ರದಿಂದ ಬರುವವರಿಗೆ ಮಾತ್ರವಲ್ಲ, ಯಾವುದೇ ರಾಜ್ಯದಿಂದ ಬಂದವರು ಕೂಡ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ಗೆ ಒಳಪಡಲೇ ಬೇಕು ಎಂದು ರಾಜ್ಯ ಸರಕಾರ ಹೇಳಿದೆ. ಕ್ವಾರಂಟೈನ್ ನಿಯಮಗಳಲ್ಲಿ ಬದಲಾವಣೆ ಮಾಡುವುದಕ್ಕೆ ಸಿಎಂ ಯಡಿಯೂರಪ್ಪ ಒಪ್ಪಿಗೆಯನ್ನು ನೀಡಿದ್ದು, ಈ ಕುರಿತು ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಅವರು ಟ್ವೀಟ್ ಮಾಡಿದ್ದಾರೆ.

- Advertisement -
spot_img

Latest News

error: Content is protected !!