Monday, April 29, 2024
Homeತಾಜಾ ಸುದ್ದಿಒಂದು ಲಕ್ಷ ಪ್ರೇಕ್ಷಕರ ಎದುರು ನಡೆಯಲಿದೆ ಕ್ವಾಲಿಫೈಯರ್​-2

ಒಂದು ಲಕ್ಷ ಪ್ರೇಕ್ಷಕರ ಎದುರು ನಡೆಯಲಿದೆ ಕ್ವಾಲಿಫೈಯರ್​-2

spot_img
- Advertisement -
- Advertisement -

ಅಹ್ಮದಾಬಾದ್​: 14ನೇ ಸೀಸನ್ IPL ಮುಗಿಯೋಕೆ ಇನ್ನೆರಡು ಪಂದ್ಯ ಮಾತ್ರ ಬಾಕಿ. ಫೈನಲ್​ಗೂ ಮುನ್ನ ಇಂದು ಸೆಕೆಂಡ್ ಕ್ವಾಲಿಫೈಯರ್ ಮ್ಯಾಚ್ ನಡೆಯುತ್ತಿದ್ದು, RCB ಮತ್ತು ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗ್ತಿವೆ. ಗೆದ್ದರೆ ಫೈನಲ್​ಗೆ ಸೋತರೆ ಮನೆ ಕಡೆಗೆ ಅನ್ನೋ ಸ್ಥಿತಿ ಎರಡು ತಂಡಕ್ಕೂ ಇದ್ದು, ಡು ಆರ್ ಡೈ ಮ್ಯಾಚ್​​ನಲ್ಲಿ ಗೆಲ್ಲಲು ಎರಡು ಟೀಮ್ಸ್ ಎದುರು ನೋಡ್ತಿವೆ.

IPL ಈಗ ಅಹ್ಮದಾಬಾದ್​ಗೆ ಶಿಫ್ಟ್ ಆಗಿದೆ. ಮಹಾರಾಷ್ಟ್ರದಲ್ಲಿ ಲೀಗ್​, ಕೋಲ್ಕತ್ತಾದಲ್ಲಿ ಕ್ವಾಲಿಫೈಯರ್​-1 ಮತ್ತು ಎಲಿಮಿನೇಟರ್ ಪಂದ್ಯ ನಡೆದಿದ್ದವು. ಈಗ ಅಹ್ಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಕ್ವಾಲಿಫೈಯರ್-2 ಹಾಗೂ ಫೈನಲ್ ಫೈಟ್ ನಡೆಯಲಿದೆ. ಅಲ್ಲಿಗೆ ಬರೋಬ್ಬರಿ ಒಂದು ಲಕ್ಷ ಪ್ರೇಕ್ಷಕರ ಎದುರು ಈ ಎರಡು ಮಹತ್ವದ ಪಂದ್ಯಗಳು ನಡೆಯಲಿವೆ. ಲೀಗ್​ನಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದ RCB ಮತ್ತು ರಾಜಸ್ಥಾನ ತಲಾ ಒಂದು ಗೆದ್ದು ಒಂದನ್ನ ಸೋತಿದ್ದವು. ಆ ಎರಡು ಮ್ಯಾಚಲ್ಲೂ ಅಷ್ಟಾಗಿ ರನ್ ಬಂದಿರಲಿಲ್ಲ. ಆದ್ರೆ ಇಂದು ಮೋದಿ ಸ್ಟೇಡಿಯಂನಲ್ಲಿ ರನ್ ಹೊಳೆಯೇ ಹರಿಯಲಿದೆ.

RCB ಹಾಗೂ ರಾಜಸ್ದಾನ 14 ವರ್ಷಗಳಿಂದ ವನವಾಸ ಅನುಭವಿಸುತ್ತಿವೆ. 2008ರ ಚೊಚ್ಚಲ IPL ಟ್ರೋಫಿ ಗೆದ್ದ ನಂತರ ರಾಜಸ್ಥಾನ ಮತ್ತೊಂದು ಕಪ್ ಗೆದ್ದಿಲ್ಲ. ಕಪ್ ಯಾಕೆ ಫೈನಲ್ ಸಹ ಪ್ರವೇಶಿಸಿಲ್ಲ. ಈಗ 14 ವರ್ಷಗಳ ನಂತರ ಫೈನಲ್ ಪ್ರವೇಶಿಸಲು ಪಿಂಕ್ ಆರ್ಮಿ ಎದುರು ನೋಡ್ತಿದೆ. ಇನ್ನು RCB 14 ವರ್ಷಗಳಿಂದ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಇಂದು ಗೆದ್ದು 4ನೇ ಬಾರಿಗೆ ಫೈನಲ್ ಪ್ರವೇಶಿಸಲು ಪ್ಲಾನ್ ಮಾಡಿದೆ. ಸತತ ಎರಡು ಜಯಗಳಿಸಿ, ಕ್ವಾಲಿಫೈಯರ್​​-2ಗೆ ಬಂದಿರೋ ರೆಡ್ ಆರ್ಮಿ ಪಡೆ, ಮತ್ತೆರಡು ಜಯ ದಾಖಲಿಸಿ, 14 ವರ್ಷಗಳ ಕಪ್ ಬರ ನೀಗಿಸಿಕೊಳ್ಳಲೂ ರೆಡಿಯಾಗಿದೆ.

14 ಪಂದ್ಯಗಳಲ್ಲಿ 8 ಗೆದ್ದು ಆರನ್ನ ಸೋತು ಪ್ಲೇ ಆಫ್​​ಗೆ ಬಂದಿರುವ ರೆಡ್ ಆರ್ಮಿ ಪಡೆಗೆ ಆಟದ ಜೊತೆ ಅದೃಷ್ಟವೂ ಇದೆ. ಡೆಲ್ಲಿ ವಿರುದ್ಧ ಮುಂಬೈ ಗೆದ್ದಿದ್ದರಿಂದಲೇ ಬೆಂಗಳೂರು ಟೀಮ್​ ಪ್ಲೇ ಆಫ್​ಗೆ ಬಂದಿದ್ದು. ಕೋಲ್ಕತ್ತಾದಲ್ಲಿ ಒಂದು ವಾರದಿಂದ ಮಳೆ ಬರುತ್ತಿದೆ. ಮೊನ್ನೆಯೂ ಮಳೆ ಬಂದಿದ್ದರಿಂದ ಪಂದ್ಯ ಅರ್ಧಗಂಟೆ ಲೇಟಾಗಿ ಸ್ಟಾರ್ಟ್​ ಆಯ್ತು. ಆದ್ರೆ RCB ಅದೃಷ್ಟ ಚೆನ್ನಾಗಿತ್ತು. ಮಳೆ ನಿಂತಿತು. ಬಳಿಕ RCB ರನ್ ಮಳೆ ಸುರಿಸಿ, ಲಕ್ನೋ ವಿರುದ್ಧ ಗೆದ್ದಿತು.

ಸದ್ಯ RCB ಪ್ಲೇಯರ್ಸ್ ಅದ್ಭುತ ಫಾರ್ಮ್​ನಲ್ಲಿದ್ದಾರೆ. ಪ್ಲೇಯಿಂಗ್-11 ಚೇಂಜ್ ಆಗೋ ಮಾತೇ ಇಲ್ಲ. ನಾಯಕ ಡುಪ್ಲೆಸಿಸ್, ಕೊಹ್ಲಿ ಮತ್ತು ಮ್ಯಾಕ್ಸ್​​ವೆಲ್ ಕ್ವಾಲಿಫೈಯರ್-1ರಲ್ಲಿ ವಿಫಲರಾದ್ರೂ 207 ರನ್ ಬಾರಿಸಿತು ಅಂದ್ರೆ, ಅದರಲ್ಲೇ ಗೊತ್ತಾಗುತ್ತೆ ಆರ್​ಸಿಬಿ ತಾಕತ್ತು. ಬೌಲಿಂಗ್​ ಸಹ ಸ್ಟ್ರಾಂಗ್ ಆಗಿ ಇರೋದ್ರಿಂದ ಇಂದು ಈಸಿಯಾಗಿ ರೆಡ್ ಆರ್ಮಿಯನ್ನ ಸೋಲಿಸಲಾಗಲ್ಲ. ಪರ್ಪಲ್ ಕ್ಯಾಪ್ ಗೆಲ್ಲಲು ಹಸರಂಗ ಮತ್ತು ಚಹಲ್ ನಡ್ವೆ ಫೈಟ್ ಬೇರೆ ಬಿದ್ದಿದೆ.

ಗರಿಷ್ಠ ರನ್ ಸರದಾರ ಜೋಶ್ ಬಟ್ಲರ್, ಆರೆಂಜ್  ಕ್ಯಾಪ್ ಗೆಲ್ಲೋದು ಗ್ಯಾರಂಟಿ. RCBಗೆ ಅವರೇ ಕಂಟಕವಾದ್ರೂ ಆಶ್ಚರ್ಯವಿಲ್ಲ. ಬಟ್ಲರ್ ಮಾತ್ರವಲ್ಲ, ಈ ಹಿಂದೆ RCB ಪರ ಆಡಿ ಈಗ ರಾಜಸ್ಥಾನ ತಂಡದಲ್ಲಿರುವ ದೇವದತ್​ ಪಡಿಕ್ಕಲ್, ಹೆಟ್ಮೆಯರ್​, ಚಹಲ್ ಸಹ RCBಗೆ ಭಯ ಹುಟ್ಟಿಸಿದ್ದಾರೆ. ಕರ್ನಾಟಕದ ಪಡಿಕ್ಕಲ್, ಕರುಣ್ ನಾಯರ್​, ಪ್ರಸಿದ್ದ್ ಕೃಷ್ಣ ಸಹ ರಾಯಲ್ಸ್ ಟೀಮ್​ನಲ್ಲಿದ್ದು ಅವರು ಬೆಂಗಳೂರಿಗೆ ಆಘಾತ ನೀಡಲು ಎದುರು ನೋಡ್ತಿದ್ದಾರೆ. ಒಟ್ನಲ್ಲಿ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಇಂದು ಬಿಗ್ ಫೈಟ್ ನಡೆಯೋದು ಗ್ಯಾರಂಟಿ.

- Advertisement -
spot_img

Latest News

error: Content is protected !!