Friday, June 5, 2026
Homeತಾಜಾ ಸುದ್ದಿಫೇಸ್ ಬುಕ್ ನಲ್ಲಿ ಕಪಲ್ ಛಾಲೆಂಜ್ ಅಂತಾ ಫೋಟೋ ಹಾಕೋ ಮುನ್ನ ಎಚ್ಚರ..!

ಫೇಸ್ ಬುಕ್ ನಲ್ಲಿ ಕಪಲ್ ಛಾಲೆಂಜ್ ಅಂತಾ ಫೋಟೋ ಹಾಕೋ ಮುನ್ನ ಎಚ್ಚರ..!

- Advertisement -
- Advertisement -

ಪುಣೆ : ಫೇಸ್ ಬುಕ್ ನಲ್ಲಿ ದಿನಕ್ಕೊಂದರಂತೆ ಹೊಸ ಹೊಸ ಛಾಲೆಂಜ್ ಗಳು ಶುರುವಾಗುತ್ತಿವೆ. ಅವರಿಗಿಂತ ನಾವೇನು ಕಮ್ಮಿ ಅನ್ನೋ ಹಾಗೇ ಜನ ಸಿಂಗಲ್ ಛಾಲೆಂಜ್, ಕಪಲ್ ಛಾಲೆಂಜ್, ಫ್ರೆಂಡ್ ಶಿಫ್ ಛಾಲೆಂಜ್, ಸ್ಮೈಲ್ ಛಾಲೆಂಜ್ ಅಂತಾ ಫೋಟೋ ಹಾಕ್ತಿದ್ದಾರೆ. ಆದರೆ ಹೀಗೆ ಫೋಟೋ ಹಾಕುವಾಗ ಎಚ್ಚರ ಅಂತಾ ಪುಣೆ ಪೊಲೀಸರು ವಾರ್ನ್ ಮಾಡಿದ್ದಾರೆ.

ಅದರಲ್ಲೂ ಕಪಲ್ ಛಾಲೆಂಜ್ ಹೆಸರಲ್ಲಿ ಫೋಟೋಗಳನ್ನು ಶೇರ್ ಮಾಡುವಾಗ ಎಚ್ಚರಿಕೆ ಅಂತಾ ಪುಣೆ ಪೊಲೀಸರು ಹೇಳಿದ್ದಾರೆ. ಟ್ವೀಟರ್​ ಮೂಲಕ ಮಾಹಿತಿ ನೀಡಿರುವ ಪೊಲೀಸರು, ದಯವಿಟ್ಟು ಇಂಥ ಚಾಲೆಂಜ್​ಗಳನ್ನು ಸ್ವೀಕರಿಸುವ ಮುನ್ನ ಬಹಳ ಜಾಗರೂಕರಾಗಿ ಇರಬೇಕು ಎಂದು ಹೇಳಿದ್ದಾರೆ.

ಈ ಬಗ್ಗೆ  ತಮಗೆ ದೂರುಗಳು ಬಂದಿರುವ ಮಾಹಿತಿಯನ್ನು ಆಧರಿಸಿ ಈ ಎಚ್ಚರಿಕೆಯನ್ನು ಪೊಲೀಸರು ನೀಡಿದ್ದಾರೆ. ಅದರಲ್ಲಿಯೂ ಹೆಚ್ಚಾಗಿ ಕಪಲ್​ ಚಾಲೆಂಜ್​ನಲ್ಲಿ ಹಾಕಿರುವ ಫೋಟೋಗಳನ್ನು ತಿರುಚಿ, ಅದನ್ನು ಪೋರ್ನ್​ ವೆಬ್​ಸೈಟ್​ಗಳಿಗೆ ಅಪ್​ಲೋಡ್​ ಮಾಡುವ ಮೂಲಕ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇಂಥ ಫೋಟೋಗಳನ್ನು ದುರುಪಯೋಗ ಪಡಿಸಿಕೊಂಡಿರುವ ಹಲವಾರು ಕಂಪ್ಲೇಂಟ್​ಗಳು ತಮಗೆ ಬಂದಿರುವುದಾಗಿ ಪೊಲೀಸರು ಹೇಳಿದ್ದಾರೆ.

ಸಾಮಾನ್ಯವಾಗಿ ಫೇಸ್​ಬುಕ್​ಗೆ ಹಾಕುವ ವೈಯುಕ್ತಿಕ ಫೋಟೋಗಳ ಬಗ್ಗೆ ಇದಾಗಲೇ ಸಾಕಷ್ಟು ಎಚ್ಚರಿಕೆ ಸಂದೇಶಗಳು ಬರುತ್ತಿರುವ ನಡುವೆಯೇ ಕಪಲ್​ ಚಾಲೆಂಜ್​ ಹೆಸರಿನಲ್ಲಿ ಆಗುತ್ತಿರುವ ದುರ್ಬಳಕೆ ಕುರಿತಂತೆ ತುಂಬಾ ಜಾಗರೂಕರಾಗಿ ಇರಬೇಕು. ಇಂಥ ಚಾಲೆಂಜ್​ಗಳನ್ನು ಸ್ವೀಕರಿಸುವಾಗ ಎಚ್ಚರಿಕೆ ವಹಿಸಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಅಪ್​ಲೋಡ್​ ಮಾಡುವ ಮೊದಲು ಎರಡೆರಡು ಬಾರಿ ಯೋಚಿಸಿ ಎಂದು ಟ್ವಿಟ್ಟರ್ ಖಾತೆಯ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ.

- Advertisement -

Latest News

error: Content is protected !!