Friday, June 26, 2026
Homeತಾಜಾ ಸುದ್ದಿ2 ಬಾರಿ ಸಿಸಿಬಿ ನೋಟಿಸ್ ನೀಡಿದ್ರೂ ವಿಚಾರಣೆಗೆ ಹಾಜರಾಗದ ಪ್ರಿಯಾಂಕ ಆಳ್ವ: ಎನ್ಕ್ವೈರಿಗೆ ಬಾರದಕ್ಕೆ ಕೊಟ್ಟ...

2 ಬಾರಿ ಸಿಸಿಬಿ ನೋಟಿಸ್ ನೀಡಿದ್ರೂ ವಿಚಾರಣೆಗೆ ಹಾಜರಾಗದ ಪ್ರಿಯಾಂಕ ಆಳ್ವ: ಎನ್ಕ್ವೈರಿಗೆ ಬಾರದಕ್ಕೆ ಕೊಟ್ಟ ಕಾರಣ ಏನ್ ಗೊತ್ತಾ?

- Advertisement -
- Advertisement -

ಬೆಂಗಳೂರು: ಡ್ರಗ್ಸ್ ಕೇಸ್​ನಲ್ಲಿ ಆದಿತ್ಯ ಆಳ್ವಾ ಎಸ್ಕೇಪ್ ಆಗಿದ್ದಕ್ಕೆ ಸಹೋದರಿ ಪ್ರಿಯಾಂಕ ಆಳ್ವಾಗೆ ಸಂಕಷ್ಟ ಎದುರಾಗಿದೆ. ಆದಿತ್ಯ ಎಸ್ಕೇಪ್ ಆಗಲು ಸಹಾಯ ಮಾಡಿದ ಆರೋಪದಡಿ ಪ್ರಿಯಾಂಕ ಆಳ್ವಾಗೆ ಈಗಾಗಲೇ 2 ಬಾರಿ ಸಿಸಿಬಿ ನೋಟಿಸ್ ನೀಡಿದೆ. ಆದರೆ ಸಿಸಿಬಿ ನೋಟಿಸ್​ಗೆ ಪ್ರಿಯಾಂಕ ಇ-ಮೇಲ್ ಮೂಲಕ ಉತ್ತರ ನೀಡಿದ್ದಾರೆ.

ನಾನು ಸದ್ಯಕ್ಕೆ ವಿಚಾರಣೆಗಾಗಿ ಬೆಂಗಳೂರಿಗೆ ಬರಲು ಸಾಧ್ಯವಿಲ್ಲ. ಇಬ್ಬರು ಚಿಕ್ಕ ಮಕ್ಕಳಿದ್ದಾರೆ, ಮಕ್ಕಳನ್ನು ಬಿಟ್ಟು ಬರಲು ಸಾಧ್ಯವಿಲ್ಲ. ಒಂದು ವೇಳೆ ಬಂದರೆ ಮಕ್ಕಳನ್ನು ಕರೆದುಕೊಂಡು ಬರಬೇಕು. ಬೆಂಗಳೂರಿನಲ್ಲಿ ಕೊರೊನಾ ಕೇಸ್ ಹೆಚ್ಚಿರುವುದರಿಂದ ಮಕ್ಕಳನ್ನು ಕರೆದುಕೊಂಡು ಮುಂಬೈನಿಂದ ಬೆಂಗಳೂರಿಗೆ ಬರಲು ಸಾಧ್ಯವಿಲ್ಲ. ಸ್ವಲ್ಪ ದಿನಗಳ ನಂತರ ಬಂದು ವಿಚಾರಣೆಗೆ ಹಾಜರಾಗುತ್ತೇನೆ. ಆಗ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಗೆ ಇ-ಮೇಲ್ ಮೂಲಕ ಉತ್ತರಿಸಿದ್ದಾರೆ.

- Advertisement -

Latest News

error: Content is protected !!