Thursday, June 4, 2026
Homeಕರಾವಳಿಮಂಗಳೂರು_ದಂಪತಿ ಆತ್ಮಹತ್ಯೆ ಬೆನ್ನಲ್ಲೇ ಬಡ್ಡಿ ಮಾಫಿಯಾಗೆ ಪೊಲೀಸ್ ಕಮಿಷನರ್ ವಾರ್ನಿಂಗ್.

ಮಂಗಳೂರು_ದಂಪತಿ ಆತ್ಮಹತ್ಯೆ ಬೆನ್ನಲ್ಲೇ ಬಡ್ಡಿ ಮಾಫಿಯಾಗೆ ಪೊಲೀಸ್ ಕಮಿಷನರ್ ವಾರ್ನಿಂಗ್.

- Advertisement -
- Advertisement -

ಮಂಗಳೂರು_ಮಂಗಳೂರಿನ ಕದ್ರಿ ಬಳಿಯ ಪಿಂಟೋಸ್ ಲೇನ್ ನಲ್ಲಿ ನಡೆದ ದಂಪತಿಗಳ ಆತ್ಮಹತ್ಯೆ ಬೆನ್ನಲ್ಲೇ ಬಡ್ಡಿ ಮಂಗಳೂರು ಕಮೀಷನರೇಟ್ ವ್ಯಾಪ್ತಿಯ ಬಡ್ಡಿ ಮಾಫಿಯಾಗೆ ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಖಡಕ್ ವಾರ್ನಿಂಗ್ ನೀಡಿದ್ದಾರೆ.

ಆತ್ಮಹತ್ಯೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಆರ್ಥಿಕ ಮುಗ್ಗಟ್ಟಿನಲ್ಲಿ ದಂಪತಿಗಳು ಆತ್ಮಹತ್ಯೆ ಮಾಡಿಕೊಂಡಿರುವುದು ಕೆಟ್ಟ ನಿರ್ಧಾರವಾಗಿದೆ. ಈ ಕರೋನಾ ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಈ ನಡುವೆ ಕಮೀಷನರೇಟ್ ವ್ಯಾಪ್ತಿಯಲ್ಲಿ ಹೆಚ್ಚಿನ ದರದಲ್ಲಿ ಬಡ್ಡಿ ವಸೂಲಿ ಮಾಡ್ತಿರೋದು ಗಮನಕ್ಕೆ ಬಂದಿದೆ ಇಂಥವರ ವಿರುದ್ಧ ಎಕ್ಸೋರ್ಬಿಟಂಟ್ ರೇಟ್ ಆಫ್ ಇಂಟ್ರೇಸ್ ಆಕ್ಟ್ ನಡಿ ಪ್ರಕರಣ ದಾಖಲಿಸಲು ಅವಕಾಶ ಇದೆ. ಅತಿಯಾದ ಬಡ್ಡಿ ವಸೂಲಿಗೆ ಒತ್ತಡ , ಬೆದರಿಕೆ ಹಾಕಿದಲ್ಲಿ ಸ್ಥಳೀಯ ಠಾಣೆಗೆ ದೂರು ನೀಡಿ. ಇಂತಹ ರಿಸ್ಕ್ ತೆಗೆದುಕೊಳ್ಳದೇ ಸುರಕ್ಷಿತ ಹಣಕಾಸು ವ್ಯವಹಾರ ಮಾಡಿದರೆ ಉತ್ತಮ ಎಂದು ಹೇಳಿದರು..

- Advertisement -

Latest News

error: Content is protected !!