Tuesday, May 14, 2024
HomeUncategorizedಮಂಗಳೂರಿನ ಅಡ್ಯಾರು ಕಟ್ಟೆಯಲ್ಲಿ ತೇಲಿ ಬಂದ ಪ್ರೇಮಿಗಳ ಶವ: ವಿಡಿಯೋ ನೋಡಿ ಶಾಕ್ ಆದ ಜನ:...

ಮಂಗಳೂರಿನ ಅಡ್ಯಾರು ಕಟ್ಟೆಯಲ್ಲಿ ತೇಲಿ ಬಂದ ಪ್ರೇಮಿಗಳ ಶವ: ವಿಡಿಯೋ ನೋಡಿ ಶಾಕ್ ಆದ ಜನ: ಅಷ್ಟಕ್ಕೂ ಆತ್ಮಹತ್ಯೆಗೆ ಕಾರಣ ಏನು ಗೊತ್ತಾ?

spot_img
- Advertisement -
- Advertisement -

ಮಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ನಿನ್ನೆಯಿಂದ ವಿಡಿಯೋ ಒಂದು ಹರಿದಾಡುತ್ತಿದೆ. ಒಂದು ಯುವಕ ಹಾಗೂ ಯುವತಿಯ ಶವ ನೀರಿನಲ್ಲಿ ತೇಲಿದಂತಿದೆ. ಈ ವಿಡಿಯೋ ನೋಡಿದ ಬಹುತೇಕರು ಇದು ಪ್ರೇಮಿಗಳು ಇಬ್ಬರೂ ಆತ್ಮಹತ್ಯೆಗೆ ಶರಣಾಗಿರುವ ವಿಡಿಯೋ ಅಂದುಕೊಂಡಿದ್ದರು . ನೋಡೋಕು ಅದು ಅದೇ ರೀತಿ ಇದೆ. ಇಬ್ಬರೂ ಶವದ ರೀತಿ ನೀರಿನಲ್ಲಿ ತೇಲುತ್ತಿದ್ದಾರೆ. ಬಹುತೇಕರು ವಿಡಿಯೋ ನೋಡಿ ಇದ್ಯಾವುದೋ ಸೂಸೈಡ್ ಕೇಸ್ ಇರ್ಬೇಕು ಅಂದುಕೊಂಡಿದ್ದರು. ಆದ್ರೆ ಆಮೇಲೆ ಅಸಲಿಯತ್ತು ಗೊತ್ತಾಗಿದೆ.

ಹೌದು.. ಇದು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳ ಶವದ ವಿಡಿಯೋವಲ್ಲ. ಬದಲಿಗೆ ಫೋಟೋ ಶೂಟ್ ಅನ್ನೋದು ಇನ್ನೊಂದು ವಿಡಿಯೋದಿಂದ ಗೊತ್ತಾಗಿದೆ. ಸದ್ಯ ಈ ಎರಡು ವಿಡಿಯೋಗಳು ವಾಟ್ಯಾಪ್ ನಲ್ಲಿ ಹರಿದಾಡುತ್ತಿದೆ. ಅಡ್ಯಾರು ಕಟ್ಟೆಯಲ್ಲಿ ತೇಲಿ ಬಂದ ಶವ ಅನ್ನೋ ಕ್ಯಾಪ್ಶನ್ ನೊಂದಿಗೆ ಈ ವಿಡಿಯೋ ವೈರಲ್ ಆಗಿದೆ. ಇನ್ನು ಇದು ಮಂಗಳೂರಿನ ಅಡ್ಯಾರಿನಲ್ಲಿ ನಡೆದ ಫೋಟೋ ಶೂಟ್ ಅಂತಾ ಹೇಳಲಾಗುತ್ತಿದೆ. ಆದ್ರೆ ಎಲ್ಲಿ ಅನ್ನೋ ಬಗ್ಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ.

ಇತ್ತೀಚೆಗೆ ಫೋಟೋ ಶೂಟ್ ಗಾಗಿ ಜನ ಏನೆಲ್ಲಾ ಮಾಡ್ತಾರೆ ಅನ್ನೋದನ್ನು ನೀವೆಲ್ಲಾ ನೋಡೇ ಇರ್ತೀರಾ.. ಆದ್ರೆ ಈ ಫೋಟೋ ಶೂಟ್ ಮಾತ್ರ ಅವೆಲ್ಲವನ್ನು ಮೀರಿಸುವಂತಿದೆ ಅನ್ನೋದು ಮಾತ್ರ ಸತ್ಯ.

- Advertisement -
spot_img

Latest News

error: Content is protected !!