Tuesday, May 14, 2024
Homeಕರಾವಳಿಕ್ರೇನ್‌ ಮೂಲಕ ರಸ್ತೆ ಅಗಲೀಕರಣ ವೇಳೆ ಕ್ರೇನ್ ಗೆ ತಗುಲಿದ ಹೈವೊಲ್ಟೇಜ್ ವಿದ್ಯುತ್‌ ತಂತಿ: ಕ್ರೇನ್...

ಕ್ರೇನ್‌ ಮೂಲಕ ರಸ್ತೆ ಅಗಲೀಕರಣ ವೇಳೆ ಕ್ರೇನ್ ಗೆ ತಗುಲಿದ ಹೈವೊಲ್ಟೇಜ್ ವಿದ್ಯುತ್‌ ತಂತಿ: ಕ್ರೇನ್ ಚಾಲಕ ಪವಾಡ ಸದೃಶ ಪಾರು

spot_img
- Advertisement -
- Advertisement -

ಮಂಗಳೂರು: ಕ್ರೇನ್‌ ಮೂಲಕ ರಸ್ತೆ ಅಗಲೀಕರಣ ಮಾಡುತ್ತಿದ್ದ ವೇಳೆ ಹೈವೊಲ್ಟೆಜ್ ವಿದ್ಯುತ್‌ ತಂತಿಯೊಂದು ಕ್ರೇನ್‌ ತಗುಲಿ, ಕ್ರೇನ್ ಚಾಲಕ ಪವಾಡ ಸದೃಶವಾಗಿ ಪಾರಾಗಿರುವ ಘಟನೆ ಮಂಗಳೂರಿನ ತೊಕ್ಕೊಟ್ಟು ಕುತ್ತಾರು ಜಂಕ್ಷನ್‌ನಲ್ಲಿ ನಡೆದಿದೆ.


ತೊಕ್ಕೊಟ್ಟು ಕುತ್ತಾರು ಜಂಕ್ಷನ್‌ನಲ್ಲಿ ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿದ್ದು ನಿನ್ನೆ ಕ್ರೇನ್ ಮೂಲಕ ಕಾಮಗಾರಿ ನಡೆಸಲಾಗುತ್ತಿತ್ತು. ಈ ಸಂದರ್ಭ ರಸ್ತೆ ಬದಿಯಲ್ಲಿ ಹಾದು ಹೋಗಿದ್ದ ಹೈವೊಲ್ಟೆಜ್ ತಂತಿಗೆ ಕ್ರೇನ್ ತಾಗಿದ್ದು, ಪರಿಣಾಮ ವಯರ್‌ ರಸ್ತೆಗೆ ಬಿದ್ದಿದೆ. ಕ್ರೇನ್‌ ಚಾಲಕ ತಕ್ಷಣವೇ ಕ್ರೇನ್‌ನಿಂದ ಹಾರಿ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಅದೇ ಸಮಯಕ್ಕೆ ಈ ರಸ್ತೆಯ ಮೂಲಕ ನರ್ಸಿಂಗ್‌ ವಿದ್ಯಾರ್ಥಿನಿ ನಡೆದಾಡುತ್ತಿದ್ದು ರಸ್ತೆಗೆ ಬಿದ್ದ ತಂತಿಯಿಂದ ಸೆಕೆಂಡುಗಳ ಅಂತರದಲ್ಲಿ ಪಾರಾಗುವ ಮೂಲಕ ಮಹಾ ದುರಂತವೊಂದು ತಪ್ಪಿದೆ.

ಕೆಲ ನಿಮಿಷಗಳ ಕಾಲ ರಸ್ತೆ ಸಂಚಾರದಲ್ಲಿ ವ್ಯತ್ಯಯವಾಗಿದ್ದು ಮೆಸ್ಕಾಂ ಎಇಇ ದಯಾನಂದ್‌ ಸ್ಥಳಕ್ಕೆ ಭೇಟಿ ನೀಡಿ ಲೈನ್‌ ಮೆನ್‌ಗಳಿಂದ ಜೀವದ ಹಂಗು ತೊರೆದು ತುರ್ತು ಕಾರ್ಯಾಚರಣೆ ನಡೆಸಿದ್ದು ಜತೆಗೆ ಮದನಿನಗರ ನಿವಾಸಿಗಳು ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಬಸ್‌, ವಾಹನಗಳ ಮೇಲೆ ಹಲವು ಕಿಲೋ ವ್ಯಾಟ್‌ ವಿದ್ಯುತ್‌ ಹೊಂದಿರುವ ಸಾಲು ಸಾಲು ತಂತಿಗಳು ಬೀಳುವ ಸಾಧ್ಯತೆ ಇತ್ತಾದರೂ ಪವಾಡವೇ ನಡೆದಿದೆ.

- Advertisement -
spot_img

Latest News

error: Content is protected !!