Thursday, June 4, 2026
Homeತಾಜಾ ಸುದ್ದಿನಟ ಮಂಡ್ಯ ರಮೇಶ್ ಗೆ ಪಿತೃವಿಯೋಗ- ಚಾಮುಂಡಿಬೆಟ್ಟದ ತಪ್ಪಲಿನ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ

ನಟ ಮಂಡ್ಯ ರಮೇಶ್ ಗೆ ಪಿತೃವಿಯೋಗ- ಚಾಮುಂಡಿಬೆಟ್ಟದ ತಪ್ಪಲಿನ ಮುಕ್ತಿಧಾಮದಲ್ಲಿ ಅಂತ್ಯಕ್ರಿಯೆ

- Advertisement -
- Advertisement -

ಮಂಡ್ಯ: ನಟ ಮಂಡ್ಯ ರಮೇಶ್ ಅವರ ತಂದೆ ಸುಬ್ರಹ್ಮಣ್ಯ ಅವರು ತಮ್ಮ ದಟ್ಟಗಳ್ಳಿಯ ಸೋಮನಾಥ ನಗರದ ಸ್ವಗೃಹದಲ್ಲಿ ಕೊನೆಯುಸಿರೆಳೆದರು. ನಟನಾ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಅವರು 40 ವರ್ಷಗಳ ಕಾಲ ಸರ್ಕಾರಿ ನೌಕರರಾಗಿ ಕಾರ್ಯ ನಿರ್ವಹಿಸಿದ್ದರು, ಕಲಾಪೋಷಕರಾಗಿದ್ದರು. ‌ ಅವರು ಇಬ್ಬರು ಪುತ್ರರು, ಒಬ್ಬ ಪುತ್ರಿ, ಅಳಿಯ, ಸೊಸೆ, ಮೊಮ್ಮಕ್ಕಳನ್ನು ಅಗಲಿದ್ದಾರೆ.

ನಿವೃತ್ತಿ ಬಳಿಕ ಧಾರ್ಮಿಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಮಂಡ್ಯದ ಬಡಗನಾಡು ಸಂಸ್ಥೆ, ಶಂಕರಮಠ, ಸಾಹಿತ್ಯ ಪರಿಷತ್ತು ಮುಂತಾದ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಚಾಮುಂಡಿಬೆಟ್ಟದ ತಪ್ಪಲಿನ ಮುಕ್ತಿಧಾಮದಲ್ಲಿ ಮೃತರ ಅಂತ್ಯಕ್ರಿಯೆಯು ನಡೆಯಿತು.

- Advertisement -

Latest News

error: Content is protected !!