Thursday, April 25, 2024
Homeತಾಜಾ ಸುದ್ದಿಕೇರಳದಿಂದ ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ತೆರಳಿದ್ದ ಶಿಹಾಬ್ ಗೆ ವೀಸಾ ನಿರಾಕರಿಸಿದ ಪಾಕಿಸ್ತಾನ‌ ನ್ಯಾಯಾಲಯ

ಕೇರಳದಿಂದ ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ತೆರಳಿದ್ದ ಶಿಹಾಬ್ ಗೆ ವೀಸಾ ನಿರಾಕರಿಸಿದ ಪಾಕಿಸ್ತಾನ‌ ನ್ಯಾಯಾಲಯ

spot_img
- Advertisement -
- Advertisement -

ಕೇರಳದಿಂದ ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ತೆರಳಿದ್ದ ಶಿಹಾಬ್ ಚೊಟ್ಟೂರಿಗೆ ಪಾಕಿಸ್ತಾನ‌ ನ್ಯಾಯಾಲಯ ಶಿಹಾಬ್ ವೀಸಾ ತಿರಸ್ಕರಿಸಿದೆ.

ನ್ಯಾಯಮೂರ್ತಿ ಚೌಧರಿ ಮುಹಮ್ಮದ್ ಇಕ್ಬಾಲ್ ಮತ್ತು ನ್ಯಾಯಮೂರ್ತಿ ಮುಸಮಿಲ್ ಅಖ್ತರ್ ಶಬೀರ್ ಅವರನ್ನು ಒಳಗೊಂಡ ಲಾಹೋರ್ ಹೈಕೋರ್ಟ್ ವಿಭಾಗೀಯ ಪೀಠ ಶಿಹಾಬ್ ಅವರ ಪರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.

ಲಾಹೋರ್ ಹೈಕೋರ್ಟ್ ಪೀಠವು ಶಿಹಾಬ್ ಪರವಾಗಿ ಸ್ಥಳೀಯ ನಾಗರಿಕ ಸರ್ವರ್ ತಾಜ್ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದೆ. ಅರ್ಜಿ ಸಲ್ಲಿಸುವ ವ್ಯಕ್ತಿಗೆ ಭಾರತೀಯ ಪ್ರಜೆಯೊಂದಿಗೆ ಯಾವುದೇ ಸಂಬಂಧವಿಲ್ಲ, ನ್ಯಾಯಾಲಯವನ್ನು ಸಂಪರ್ಕಿಸುವ ಅಧಿಕಾರ ವಕೀಲರು ಹೊಂದಿಲ್ಲ ಎಂದು ಪೀಠ ಹೇಳಿದೆ. ನ್ಯಾಯಾಲಯವು “ಭಾರತೀಯ ಪ್ರಜೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು” ಕೇಳಿದೆ, ಅರ್ಜಿದಾರರು ಅದನ್ನು ಒದಗಿಸಲು ಸಾಧ್ಯವಾಗಲಿಲ್ಲ.ಇದಾದ ಬಳಿಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿತ್ತು.

ಕೇರಳದಿಂದ ತೆರಳಿದ್ದ ಶಿಹಾಬ್ ಅವರು ಸುಮಾರು 3,000 ಕಿ.ಮೀ‌. ಪ್ರಯಾಣಿಸಿ ವಾಘಾ ಗಡಿ ತಲುಪಿದ್ದರು. ಆದರೆ ವಾಘಾ ಗಡಿಯಲ್ಲಿ ಪಾಕಿಸ್ತಾನದ ವಲಸೆ ಅಧಿಕಾರಿ ವೀಸಾ ಇಲ್ಲದ ಕಾರಣ ಅವರನ್ನು ತಡೆದಿದ್ದಾರೆ. ಬಳಿಕ ಪಾಕಿಸ್ತಾನದ ಪ್ರಜೆಯಾಗಿರುವ ಸರ್ವರ್ ತಾಜ್ ಅವರು ಶಿಹಾಬ್ ಗೆ ವೀಸಾ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು.

ಶಿಹಾಬ್ ಚಿತ್ತೂರು ಕೇರಳದ ಮಲಪ್ಪುರಂ ಜಿಲ್ಲೆಯ ಕೊಟ್ಟಕ್ಕಲ್ ಬಳಿಯ ನಿವಾಸಿ. ಶಿಹಾಬ್ ಅವರು ಭಾರತ, ಪಾಕಿಸ್ತಾನ,ಇರಾಕ್, ಇರಾನ್, ಕುವೈತ್‌ನ ಹಲವಾರು ರಾಜ್ಯಗಳನ್ನು ದಾಟಿ ಸೌದಿ ಅರೇಬಿಯಾವನ್ನು ತಲುಪಬೇಕಾಗಿತ್ತು.ಅವರು 2023ರ ಹಜ್‌ ನಿರ್ವಹಿಸಲು ಈ ಪ್ರಯಾಣವನ್ನು ಮಾಡುತ್ತಿದ್ದರು.

ಶಿಹಾಬ್ ಯಾತ್ರೆ ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಿತ್ತು.ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ಹೋಗುವುದು ಅವರ ಬಾಲ್ಯದ ಕನಸಾಗಿತ್ತು, ಆದರೆ ಅವರ ಪ್ರಯಾಣಕ್ಕೆ ಪಾಕಿಸ್ತಾನ ಕೋರ್ಟ್ ಸೂಕ್ತ ದಾಖಲೆ ಇಲ್ಲದ ಕಾರಣ ತಡೆ ನೀಡಿದೆ.

- Advertisement -
spot_img

Latest News

error: Content is protected !!