Monday, June 8, 2026
Homeತಾಜಾ ಸುದ್ದಿಬಯಲಾಯ್ತು ಭಾರಿ ಅಕ್ರಮ- ಮಲೇಷಿಯಾಗೆ ರಫ್ತಾಗುತ್ತಿದ್ದ 400 ಟನ್ ಗೂ ಅಧಿಕ ಪಡಿತರ ಅಕ್ಕಿ ವಶ!..

ಬಯಲಾಯ್ತು ಭಾರಿ ಅಕ್ರಮ- ಮಲೇಷಿಯಾಗೆ ರಫ್ತಾಗುತ್ತಿದ್ದ 400 ಟನ್ ಗೂ ಅಧಿಕ ಪಡಿತರ ಅಕ್ಕಿ ವಶ!..

- Advertisement -
- Advertisement -

ಕೊಪ್ಪಳ: ಇಲ್ಲಿನ ಗಂಗಾವತಿಯಲ್ಲಿ ಅಕ್ರಮವಾಗಿ ಮಲೇಷಿಯಾಗೆ 400 ಟನ್ ಗೂ ಅಧಿಕ ಪಡಿತರ ಅಕ್ಕಿಯನ್ನ ರಪ್ತು ಮಾಡಲು ಸಿದ್ದವಾಗಿದ್ದ ವೇಳೆ ದಾಳಿಮಾಡಿ ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ರೈಸ್ ಮಿಲ್, ಗೋದಾಮು, ಲಾರಿ ಮೇಲೆ ಕೊಪ್ಪಳ ಡಿಸಿ, ಎಸ್ಪಿ ಹಾಗೂ ಎಸಿ ನೇತೃತ್ವದ ತಂಡ ದಾಳಿ ನಡೆಸಿ ಬೃಹತ್ ಜಾಲವನ್ನ ಪತ್ತೆಹಚ್ಚಿದೆ.

ನಾಲ್ಕು ಲಾರಿಯಲ್ಲಿದ್ದ ಅಕ್ಕಿ, ಎರಡು ರೈಸ್ ಮಿಲ್, ಎರಡು ಗೋದಾಮಿನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟು ಅಕ್ಕಿಯನ್ನು ವಿದೇಶಕ್ಕೆ ರಪ್ತು ಮಾಡಲು ಯೋಜನೆ ರೂಪಿಸಲಾಗಿತ್ತು ಎನ್ನಲಾಗಿದೆ. ರಾಜ್ಯದಲ್ಲಿಯೇ ಈ ವರೆಗೆ ದಾಖಲಾದ ಪಡಿತರ ಅಕ್ಕಿ ಅಕ್ರಮಗಳಲ್ಲಿ ಇದು ಅತಿ ದೊಡ್ಡ ಪ್ರಮಾಣದ ಅಕ್ರಮ ಎನ್ನಲಾಗಿದೆ.

- Advertisement -

Latest News

error: Content is protected !!