Monday, June 8, 2026
Homeತಾಜಾ ಸುದ್ದಿಬಡಗುತಿಟ್ಟು ಯಕ್ಷಗಾನ ಕಲಾವಿದ ಸತೀಶ ಹೆಗಡೆ ನಿಧನ

ಬಡಗುತಿಟ್ಟು ಯಕ್ಷಗಾನ ಕಲಾವಿದ ಸತೀಶ ಹೆಗಡೆ ನಿಧನ

- Advertisement -
- Advertisement -

ಉಡುಪಿ: ಇಲ್ಲಿನ ಖ್ಯಾತ ಬಡಗುತಿಟ್ಟು ಕಲಾವಿದ ಸತೀಶ ಹೆಗಡೆ (56) ನಿಧನ ಹೊಂದಿದ್ದಾರೆ. ಅವರು ಬುಧವಾರ ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು ಮೃತರು ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.ಕೌರವ, ರಾವಣ ಮಹಿಷಾಸುರ ಮೊದಲಾದ ಖಳ ಪಾತ್ರಗಳನ್ನು ಮನೋಜ್ಞವಾಗಿ ಮಾಡುತ್ತಿದ್ದ ಇವರ ಪಾತ್ರ ಅದ್ಭುತವಾಗಿರುತ್ತಿತ್ತು.

ಸತೀಶ ಹೆಗಡೆ ಅವರು ನಾಗರಕೋಡಿಗೆ, ಕಮಲಶಿಲೆ, ಸಿಗಂಧೂರು, ಹಾಲಾಡಿ, ಗುತ್ಯಮ್ಮ, ಸೀತೂರು ಮೇಳಗಳಲ್ಲಿ ಮೂರುವರೆ ದಶಕಗಳ ಕಲಾ ಸೇವೆ ಸಲ್ಲಿಸಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ಸಮೀಪ ಹುಂಚದ ಮೂಲದವರು.

- Advertisement -

Latest News

error: Content is protected !!