Saturday, April 20, 2024
Homeತಾಜಾ ಸುದ್ದಿಸೆರಮ್ ಅಗ್ನಿ ದುರಂತ: ಐವರ ಸಾವಿನ ನಂತರವೂ ತಣಿಯದ ಬೆಂಕಿ, ಮೃತಪಟ್ಟವರ ಕುಟುಂಬಕ್ಕೆ ತಲಾ 25...

ಸೆರಮ್ ಅಗ್ನಿ ದುರಂತ: ಐವರ ಸಾವಿನ ನಂತರವೂ ತಣಿಯದ ಬೆಂಕಿ, ಮೃತಪಟ್ಟವರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಪರಿಹಾರ

spot_img
- Advertisement -
- Advertisement -

ಪುಣೆ: ಕೋವಿಶೀಲ್ಡ್ ಕೊರೋನಾ ಲಸಿಕೆ ತಯಾರಿಕೆಯಲ್ಲಿ ನಿರತವಾಗಿರುವ ಸೀರಂ ಇನ್ಸಿಟ್ಯೂಟ್ ಆಫ್ ಇಂಡಿಯಾದಲ್ಲಿ ಅಗ್ನಿ ಅವಘಡ ಉಂಟಾಗಿದ್ದು, ಈ ದುರಂತದಲ್ಲಿ 5 ಮಂದಿ ಅಸುನಿಗಿದ್ದಾರೆ.

ಇವತ್ತು ನಡೆದ ಅಗ್ನಿ ದುರಂತದಲ್ಲಿ ಐವರು ಸಿಬ್ಬಂದಿ ಸಾವನ್ನಪ್ಪಿದ್ದು, ಮೃತರ ಕುಟುಂಬಗಳಿಗೆ ತಲಾ 25 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆಯ ಎಂಡಿ ಸೈರಸ್ ಪೂನಾವಾಲಾ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಕೋವಿಶೀಲ್ಡ್ ಲಸಿಕೆ ತಯಾರಿಸುತ್ತಿರೋ ಸಂಸ್ಥೆಯ 2ನೇ ಮಹಡಿಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಇದ್ರಲ್ಲಿ ಕೆಲಸ ಮಾಡ್ತಿದ್ದ ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ಇದ್ರಲ್ಲಿ 5 ಶವಗಳು ಪತ್ತೆಯಾಗಿದ್ದು, ನಾಲ್ಕು ಜನ ಪುರುಷರು ಒಬ್ಬ ಮಹಿಳೆ ಎನ್ನಲಾಗಿದೆ.

ಅಗ್ನಿ ಅನಾಹುತಕ್ಕೆ ಕಾರಣವೇನು ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಆದ್ರೆ ನಿರ್ಮಾಣ ಹಂತದ ಈ ಕಟ್ಟಡದಲ್ಲಿ ವೆಲ್ಡಿಂಗ್ ಕೆಲಸ ನಡೀತಿತ್ತು. ಈ ವೇಳೆ ಬೆಂಕಿ ತಗುಲಿರಬಹುದು ಅಂತ ಅಧಿಕಾರಿಗಳು ಹೇಳಿದ್ದಾರೆ. ಘಟನೆ ಸಂಬಂಧ ಮಹಾರಾಷ್ಟ್ರ ಸರ್ಕಾರ ತನಿಖೆಗೆ ಆದೇಶಿಸಿದೆ. ಇನ್ನು ಅಗ್ನಿ ಅವಘಡದಿಂದ ಕೋವಿಶೀಲ್ಡ್​ ಲಸಿಕೆ, ಅದರ ಸಂಗ್ರಹಾಗಾರ ಮತ್ತು ಉತ್ಪಾದನಾ ಘಟಕಕ್ಕೆ ಯಾವುದೇ ತೊಂದ್ರೆ ಆಗಿಲ್ಲ. ನಿರ್ಮಾಣ ಹಂತದಲ್ಲಿದ್ದ ಕಟ್ಟಡವಾಗಿದ್ದರಿಂದ ಯಾವುದೇ ಲಸಿಕೆ ಅಲ್ಲಿರಲಿಲ್ಲ ಎಂದು ತಿಳಿದು ಬಂದಿದೆ.

- Advertisement -
spot_img

Latest News

error: Content is protected !!