Tuesday, June 9, 2026
Homeತಾಜಾ ಸುದ್ದಿಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ನಿವಾಸಕ್ಕೆ ಸಿಎಂ ಡಿ ಕೆ ಶಿವಕುಮಾರ್ ಭೇಟಿ

ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ನಿವಾಸಕ್ಕೆ ಸಿಎಂ ಡಿ ಕೆ ಶಿವಕುಮಾರ್ ಭೇಟಿ

- Advertisement -
- Advertisement -

ಬೆಂಗಳೂರು: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ನಿವಾಸಕ್ಕೆ ಭೇಟಿ‌ ಕೊಟ್ಟಿದ್ದಾರೆ.

ಬೆಂಗಳೂರಿನ ಸಂಜಯನಗರದಲ್ಲಿರುವ ಸದಾನಂದ ಗೌಡರ ನಿವಾಸ ಸದಾಸ್ಮಿತಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳನ್ನು ಸದಾನಂದ ಗೌಡ ಕುಟುಂಬ ಸಮೇತವಾಗಿ ಆರತಿ ಬೆಳಗಿ ಸ್ವಾಗತಿಸಿದರು. ನಂತರ ಮನೆಯಲ್ಲಿ ಡಿ.ಕೆ. ಶಿವಕುಮಾರ್ ಗೆ ಶಾಲು ಹೊದಿಸಿ ಸನ್ಮಾನಿಸಿದ ಸದಾನಂದ ಗೌಡರು ಭಗವದ್ಗೀತೆ ಪುಸ್ತಕ ಕೊಟ್ಟು ತಮ್ಮ ನಿವಾಸದ ದೇವರ ಕೋಣೆಗೆ ಮುಖ್ಯಮಂತ್ರಿಗಳನ್ನು ಕರೆದೊಯ್ದು ರಾಜ್ಯದಲ್ಲಿ ಉತ್ತಮ ಆಡಳಿತ ನಡೆಸಲು ಶಕ್ತಿ ದೊರೆಯಲಿ ಎಂದು ಮನೆ ದೇವರು ತಿರುಪತಿ ವೆಂಕಟೇಶ್ವರನಲ್ಲಿ ಪ್ರಾರ್ಥಿಸಿದರು. ಇದೇ ವೇಳೆ ಡಿವಿಎಸ್ ಮೊಮ್ಮಗಳು ಹಿತಾಂಶಿ ತಾನು ರಚಿಸಿದ ಚಿತ್ರವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಉಡುಗೊರೆಯಾಗಿ ನೀಡಿದಳು. ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತರನ್ನು ಪರಿಚಯಿಸಿದ ಸದಾನಂದ ಗೌಡರ ಜೊತೆ ಡಿ.ಕೆ ಶಿವಕುಮಾರ್ ಉಪಹಾರವನ್ನೂ ಸವಿದರು.

- Advertisement -

Latest News

error: Content is protected !!