Tuesday, August 18, 2026
Homeಕರಾವಳಿನಾಪತ್ತೆಯಾಗಿದ್ದ ಕುಂದಾಪುರದ ಮೂಲದ ಮೀನುಗಾರನ ಶವ ಉಳ್ಳಾಲದಲ್ಲಿ ಪತ್ತೆ

ನಾಪತ್ತೆಯಾಗಿದ್ದ ಕುಂದಾಪುರದ ಮೂಲದ ಮೀನುಗಾರನ ಶವ ಉಳ್ಳಾಲದಲ್ಲಿ ಪತ್ತೆ

- Advertisement -
- Advertisement -

ಉಳ್ಳಾಲ: ಮಂಗಳೂರಿನ ದಕ್ಕೆಯಿಂದ ಮೀನುಗಾರಿಕೆಗೆ ತೆರಳಿದ್ದಾಗ ಸಮುದ್ರದ ಬೃಹತ್‌ ಅಲೆಗೆ ಸಿಲುಕಿ ನಾಪತ್ತೆಯಾಗಿದ್ದ ಕುಂದಾಪುರದ ಯುವಕ ನಾರಾಯಣ (31) ಅವರ ಮೃತದೇಹ ಸೋಮವಾರ ಉಳ್ಳಾಲದ ಕೋಟೆಪುರ ಅಳಿವೆಬಾಗಿಲಿನಲ್ಲಿ ಪತ್ತೆಯಾಗಿದೆ.

ಆಗಸ್ಟ್ 9ರಂದು ಉಳ್ಳಾಲ ಮೂಲದ ‘ಓಷಿಯನ್ ಸ್ಟಾರ್’ ಎಂಬ ಬೋಟ್‌ನಲ್ಲಿ ನಾರಾಯಣ ಅವರು ಮೀನುಗಾರಿಕೆಗೆ ತೆರಳಿದ್ದರು. ಹೊಸದಾಗಿ ಕೆಲಸಕ್ಕೆ ಸೇರಿದ್ದ ಅವರು, ಪ್ರಯಾಣದ ವೇಳೆ ಅಲೆಗಳ ಭೋರ್ಭಾತಕ್ಕೆ ಸಿಲುಕಿ ನೀರುಪಾಲಾಗಿದ್ದರು. ಈ ಕುರಿತು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಸೋಮವಾರ ಕೋಟೆಪುರ ಅಳಿವೆಬಾಗಿಲಿನ ಬಳಿ ತೇಲಿಬಂದ ಮೃತದೇಹವನ್ನು ಸಹೋದರರು ನಾರಾಯಣ ಅವರದ್ದೇ ಎಂದು ಗುರುತಿಸಿದ್ದಾರೆ. ವೆನ್‌ಲಾಕ್ ಆಸ್ಪತ್ರೆಯಲ್ಲಿ ಶವಮಹಜರು ಪ್ರಕ್ರಿಯೆ ನಡೆಸಲಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!