- Advertisement -
![]()
- Advertisement -
ಕಾರವಾರ : ಸಮುದ್ರದಲ್ಲಿ ಈಜಲು ತೆರಳಿದ ಬೆಂಗಳೂರಿನ ಓರ್ವನನ್ನು ರಕ್ಷಿಸಲು ಧಾವಿಸಿದ ನಾಲ್ವರ ಪೈಕಿ ಮೂವರು ಕಡಲ ಅಲೆಗೆ ಸಿಲುಕಿ ಸಾವನ್ನಪ್ಪಿದ್ದು. ಇಬ್ಬರನ್ನು ಸ್ಥಳೀಯ ಮೀನುಗಾರರು ರಕ್ಷಿಸಿದ್ದಾರೆ.ಈ ಘಟನೆ ಗೋಕರ್ಣದಲ್ಲಿ ವರದಿಯಾಗಿದ್ದು ತಿಪ್ಪೇಶ, ಸುಮಾ, ಹಾಗೂ ರವಿ ಮೃತಪಟ್ಟ ದುರ್ದೈವಿಗಳು.
ಗೋಕರ್ಣಕ್ಕೆಬೆಂಗಳೂರಿನಿಂದ ದೇವರ ದರ್ಶನ ಪಡೆಯಲು ಆಗಮಿಸಿದ್ದ 16 ಮಂದಿ ಪೈಕಿ ಯುವಕ ತಿಪ್ಪೇಶ್ ಸಮುದ್ರಕ್ಕಿಳಿದಿದ್ದಾನೆ. ಈ ವೇಳೆ ಅಲೆಯ ಅಬ್ಬರ ಆತನನ್ನು ನೀರಿನ ಒಳಕ್ಕೆ ಸೆಳೆಯಿತು. ಇದನ್ನು ಗಮನಿಸಿದ ಇತರರು ನೀರಿಗೆ ದುಮುಕಿ ಅವಘಡ ಸಂಭವಿಸಿದೆ.
- Advertisement -


