Wednesday, August 19, 2026
Homeಪ್ರಮುಖ-ಸುದ್ದಿಮಧ್ಯಾಹ್ನದ ಬಿಸಿಯೂಟ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ: ಉಪ್ಪೆಂದು ಭಾವಿಸಿ ಡಿಟರ್ಜೆಂಟ್ ಪೌಡರ್ ಹಾಕಿದ ಅಡುಗೆ...

ಮಧ್ಯಾಹ್ನದ ಬಿಸಿಯೂಟ ಸೇವಿಸಿ 40 ವಿದ್ಯಾರ್ಥಿಗಳು ಅಸ್ವಸ್ಥ: ಉಪ್ಪೆಂದು ಭಾವಿಸಿ ಡಿಟರ್ಜೆಂಟ್ ಪೌಡರ್ ಹಾಕಿದ ಅಡುಗೆ ಸಿಬ್ಬಂದಿ

- Advertisement -
- Advertisement -

ಬಿಹಾರದ ನಳಂದ ಜಿಲ್ಲೆಯ ನೂರ್‌ಸರಾಯಿ ಪೊಲೀಸ್ ಠಾಣೆ ವ್ಯಾಪ್ತಿಯ ಪಾರಸಿ ಮಾಧ್ಯಮಿಕ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ಕನಿಷ್ಠ 40 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದಾರೆ.

ಬೇರೊಂದು ಶಾಲೆಯಿಂದ ಪೂರೈಕೆಯಾಗಿದ್ದ ಸೋಯಾಬೀನ್ ಪಲ್ಯದಲ್ಲಿ ಉಪ್ಪು ಕಡಿಮೆಯಿದ್ದಾಗ ವಿದ್ಯಾರ್ಥಿಗಳು ಉಪ್ಪು ಕೇಳಿದ್ದು, ಈ ವೇಳೆ ಸಿಬ್ಬಂದಿ ಕಣ್ತಪ್ಪಿನಿಂದ ಉಪ್ಪಿನ ಬದಲು ಡಿಟರ್ಜೆಂಟ್ ಪೌಡರ್ ನೀಡಿದ್ದಾರೆ. ಇದನ್ನು ಅರಿಯದೇ ಸೇವಿಸಿದ ಮಕ್ಕಳಿಗೆ ತಕ್ಷಣವೇ ತೀವ್ರ ಹೊಟ್ಟೆನೋವು ಹಾಗೂ ವಾಂತಿ ಕಾಣಿಸಿಕೊಂಡಿದೆ. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಶಾಲಾ ಆಡಳಿತ ಮಂಡಳಿಯು ತಕ್ಷಣವೇ ಎಲ್ಲಾ ಮಕ್ಕಳನ್ನು ಬಿಹಾರ ಶರೀಫ್ ಮಾಡೆಲ್ ಆಸ್ಪತ್ರೆಗೆ ದಾಖಲಿಸಿದೆ.

ಪ್ರಸ್ತುತ ನಳಂದ ಸಿವಿಲ್ ಸರ್ಜನ್ ಡಾ. ಜೈಪ್ರಕಾಶ್ ಸಿಂಗ್ ನೇತೃತ್ವದ ವೈದ್ಯರ ತಂಡವು ಮಕ್ಕಳಿಗೆ ತುರ್ತು ಚಿಕಿತ್ಸೆ ನೀಡಿ ಮೇಲ್ವಿಚಾರಣೆ ನಡೆಸುತ್ತಿದ್ದು, ವಿಷಯ ತಿಳಿದು ಆತಂಕಗೊಂಡ ಪೋಷಕರು ತಮ್ಮ ಮಕ್ಕಳ ಚೇತರಿಕೆಗೆ ಕಾಯುತ್ತ ಆಸ್ಪತ್ರೆಯ ಮುಂದೆ ಜಮಾಯಿಸಿದ್ದಾರೆ.

- Advertisement -

Latest News

error: Content is protected !!