- Advertisement -


- Advertisement -
ಮಂಗಳೂರು: ಅಧ್ಯಾಪಕ ವೃತ್ತಿಯೊಂದಿಗೆ ಪಶುಸಂಗೋಪನೆ ನಡೆಸುತ್ತಿರುವ ಕಲಂದರ್ ಎಂಬುವವರ ಮನೆಯ ಕಾಂಪೌಂಡ್ ಒಳಗೆ ಕೂಡಿಹಾಕಿದ್ದ ಸುಮಾರು ₹2 ಲಕ್ಷ ಮೌಲ್ಯದ ಆರು ದನಗಳನ್ನು ಕಳ್ಳರು ಎರಡು ರಾತ್ರಿಗಳಲ್ಲಿ ಕಳವು ಮಾಡಿಕೊಂಡು ಹೋಗಿದ್ದಾರೆ.
ಕಲಂದರ್ ಅವರು ತಮ್ಮ ಮನೆಯಲ್ಲಿ 13 ದನಗಳನ್ನು ಸಾಕುತ್ತಿದ್ದು, ನ. 12ರ ರಾತ್ರಿ ಎಂದಿನಂತೆ ಕಾಂಪೌಂಡ್ ಒಳಗೆ ಕೂಡಿಹಾಕಿದ್ದರು. ಮರುದಿನ ಬೆಳಿಗ್ಗೆ ನೋಡಿದಾಗ ಎರಡು ದನಗಳು ಕಳವಾಗಿರುವುದು ಕಂಡುಬಂದಿತ್ತು. ಬಳಿಕ ನ. 13ರ ರಾತ್ರಿ ಉಳಿದ ದನಗಳನ್ನು ಸುರಕ್ಷಿತವಾಗಿ ಕಟ್ಟಿಹಾಕಿದ್ದರೂ, ನ. 14ರ ಬೆಳಿಗ್ಗೆ ಮತ್ತೆ ನಾಲ್ಕು ದನಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.
ಎಲ್ಲೆಡೆ ಹುಡುಕಾಡಿದರೂ ದನಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಕಲಂದರ್ ಅವರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -


