Friday, March 29, 2024
Homeಆರಾಧನಾಕುಕ್ಕೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಳ - ಆದಿ ಕಲ್ಯಾಣ ಮಂಟಪ ಮತ್ತು ಷಣ್ಮುಖ ಪ್ರಸಾದದಲ್ಲಿ ಭಕ್ತರಿಗೆ...

ಕುಕ್ಕೆಯಲ್ಲಿ ಭಕ್ತರ ಸಂಖ್ಯೆ ಹೆಚ್ಚಳ – ಆದಿ ಕಲ್ಯಾಣ ಮಂಟಪ ಮತ್ತು ಷಣ್ಮುಖ ಪ್ರಸಾದದಲ್ಲಿ ಭಕ್ತರಿಗೆ ವಸತಿ ವ್ಯವಸ್ಥೆ

spot_img
- Advertisement -
- Advertisement -

ಸುಬ್ರಮಣ್ಯ: ನಾಗಾರಾಧನೆಯ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕಳೆದ ಹಲವಾರು ದಿನಗಳಿಂದ ಬಾರೀ ಸಂಖ್ಯೆಯಲ್ಲಿ ಭಕ್ತ ಜನರು ಆಗಮಿಸಿ ಶ್ರೀ ದೇವರ ದರುಶನ ಪಡೆದು ಸೇವಾಧಿಗಳನ್ನು ನೆರವೇರಿಸಿ ಪ್ರಸಾದ ಹಾಗೂ ಬೋಜನ ಪ್ರಸಾದ ಸ್ವೀಕರಿಸುತ್ತಿದ್ದಾರೆ.


ಬೇಸಿಗೆ ರಜೆಯೊಂದಿಗೆ ಆದಿತ್ಯವಾರದಿಂದ ಮಂಗಳವಾರ ತನಕ ನಿರಂತರವಾಗಿ ಸರಕಾರಿ ರಜಾ ದಿನವಾ ದುದರಿಂದ ದಾಖಲೆಯ ಸಂಖ್ಯೆಯಲ್ಲಿ ಶ್ರೀ ದೇವಳ ಕ್ಕೆ ಭಕ್ತರು ಆಗಮಿಸಿದ್ದರು.ಈ ಕಾರಣದಿಂದ ಶ್ರೀ ದೇವಳದ ಎಲ್ಲಾ ವಸತಿ ಗೃಹಗಳು ಭರ್ತಿಯಾಗಿತ್ತು.ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಭಕ್ತರಿಗೆ ವಸತಿ ಸೌಕರ್ಯದ ಕೊರತೆಯಾದ ಕಾರಣ ಸೋಮ ವಾರ ಶ್ರೀ ದೇವಳದಿಂದ ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ, ಗೋಪುರದ ಬಳಿಯ ಕಲ್ಯಾಣ ಮಂಟಪದಲ್ಲಿ ಮತ್ತು ಷಣ್ಮುಖ ಪ್ರಸಾದ ಬೋಜನ ಶಾಲೆಯ ಮೇಲ್ಮಹಡಿಯಲ್ಲಿ ವಸತಿ ವ್ಯವಸ್ಥೆ ಮಾಡಲಾಗಿತ್ತು.


ಅಸಂಖ್ಯಾತ ಭಕ್ತರು ಈ ವ್ಯವಸ್ಥೆಯ ಸದುಪಯೋಗ ಪಡೆದುಕೊಂಡರು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.ದೇವಳದ ವಸತಿ ಗೃಹಗಳು ಭರ್ತಿಯಾದ ಬಳಿಕ ಆದಿಸುಬ್ರಹ್ಮಣ್ಯ ಕಲ್ಯಾಣ ಮಂಟಪ, ಕಲ್ಯಾಣ ಮಂಟಪ ಮತ್ತು ಷಣ್ಮುಖ ಪ್ರಸಾದ ಬೋಜನ ಶಾಲೆಯ ಮೇಲ್ಮಹಡಿಯಲ್ಲಿ ಭಕ್ತರಿಗೆ ತಂಗಲು ವ್ಯವಸ್ಥೆ ಮಾಡಲಾಗಿತ್ತು. ಹಾಗಿದ್ದರೂ ಮದ್ಯರಾತ್ರಿ 1 ಗಂಟೆಯ ನಂತರ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಈ ನೂತನ ವ್ಯವಸ್ಥೆಯ ಅರಿವಿಲ್ಲದೆ ರಥಬೀದಿ ಯಲ್ಲಿ ತಂಗಿರುವುದು ಕಂಡು ಬಂತು.


ಮುಂದಿನ ದಿನಗಳಲ್ಲಿ ಶ್ರೀ ದೇವಳದ ಭದ್ರತಾ ಸಿಬ್ಬಂಧಿಗಳ ಮೂಲಕ ಮದ್ಯರಾತ್ರಿ ಬಳಿಕ ಬರುವ ಭಕ್ತರಿಗೂ ಈ ನೂತನ ವಸತಿ ವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ ಅವರಿಗೂ ಸೂಕ್ತ ವಸತಿ ವ್ಯವಸ್ಥೆ ಒದಗುವಂತೆ ಕ್ರಮ ಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಕೊಠಡಿ ಲಭ್ಯವಾಗದೆ ಇದ್ದ ಸಂದರ್ಭದಲ್ಲಿ ಈ ನೂತನ ವಸತಿ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶ್ರೀ ದೇವಳದಿಂದ ವಿನಂತಿಸಲಾಗಿದೆ.

- Advertisement -
spot_img

Latest News

error: Content is protected !!