Wednesday, June 3, 2026
Homeಕರಾವಳಿಪುತ್ತೂರಿನಲ್ಲಿ ಸ್ಕೂಟರ್-ಟಿಪ್ಪರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಸಾವನ್ನಪ್ಪಿದ ಸ್ಕೂಟರ್ ಸವಾರ; ಓರ್ವನ ಸ್ಥಿತಿ ಗಂಭೀರ

ಪುತ್ತೂರಿನಲ್ಲಿ ಸ್ಕೂಟರ್-ಟಿಪ್ಪರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ಸಾವನ್ನಪ್ಪಿದ ಸ್ಕೂಟರ್ ಸವಾರ; ಓರ್ವನ ಸ್ಥಿತಿ ಗಂಭೀರ

- Advertisement -
- Advertisement -

ಪುತ್ತೂರು: ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ ಪುತ್ತೂರು ಉರ್ಲಾಂಡಿ ಬೈಪಾಸ್ ರಸ್ತೆಯಲ್ಲಿ ಸ್ಕೂಟರ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ನಡೆದು ಸ್ಕೂಟರ್ ನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೋರ್ವ ಗಂಭೀರ ಗಾಯಗೊಂಡ ಘಟನೆ ನಡೆದಿದೆ.


ಅರಿಯಡ್ಕ ಗ್ರಾಮದ ಪನೆಕ್ಕಳ ಜಾರತ್ತಾರು ನಿವಾಸಿ ಆದಂ ಎಂಬವರ ಮಗ ಸಿನಾನ್ (18) ಮೃತಪಟ್ಟವರು ಎಂದು ತಿಳಿದು ಬಂದಿದೆ. ಗಂಭೀರ ಗಾಯಗೊಂಡ ಯುವಕ ಸೆಂಟ್ಯಾರ್ ನಿವಾಸಿ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಡಾ.ಗಾನ ಪಿ ಕುಮಾರ್ ಮತ್ತು ಸಂಚಾರ ಪೊಲೀಸ್ ಠಾಣಾ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!