Monday, April 29, 2024
Homeಮಹಾನ್ಯೂಸ್ಮುಂಬೈ: ಕೊರೋನಾ ವಾರಿಯರ್ಸ್ ಗೆ ಉಧ್ಯಮಿ ಎನ್. ಟಿ. ಪೂಜಾರಿಯವರಿಂದ ಸಹಾಯ

ಮುಂಬೈ: ಕೊರೋನಾ ವಾರಿಯರ್ಸ್ ಗೆ ಉಧ್ಯಮಿ ಎನ್. ಟಿ. ಪೂಜಾರಿಯವರಿಂದ ಸಹಾಯ

spot_img
- Advertisement -
- Advertisement -

ಮುಂಬಯಿ: ಖ್ಯಾತ ಹೋಟೆಲ್ ಉದ್ಯಮಿ, ಬಿಲ್ಲವ ಚೇಂಬರ್ ಆಫ್ ಕಾರ್ಮರ್ಸ್ ಮತ್ತು ಇಂಡಸ್ಟ್ರೀಸ್ ನ ಕಾರ್ಯಾಧ್ಯಕ್ಷ ಎನ್. ಟಿ. ಪೂಜಾರಿಯವರು ಜನಸಾಮಾನ್ಯರ ಸೇವೆಯಲ್ಲಿ ಈಗಾಗಲೇ ಜನಪ್ರಿಯರಾಗಿದ್ದು. ಕಳೆದ ಹಲವಾರು ವರ್ಷಗಳಿಂದ ತನ್ನ ತವರೂರಲ್ಲಿ ಅನೇಕ ಜೋಡಿಗಳಿಗೆ ತನ್ನ ಸ್ವಂಥ ಖರ್ಚಿನಿಂದ ವಿವಾಹ ಮಾಡಿಸುತ್ತಿರುವ ಕೊಡುಗೈ ದಾನಿಯಾಗಿರುವರು.

ಇದೀಗ ಲಾಕ್ ಡೌನ್ ನಿಂದಾಗಿ ಆರಂಭದ ದಿನದಿಂದಲೇ ಮುಂಬಯಿ ಮಹಾನರಗದ ಪ್ರಮುಖ ಬಾಗಗಳಲ್ಲಿರುವ ’ಬಿ’ ಹಾಗೂ ’ಸಿ’ ವಾರ್ಡ್ ನ ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿರುವ ಇನ್ನೂರಕ್ಕೂ ಅಧಿಕ ವೈದ್ಯರಿಗೆ, ನರ್ಸಗಳಿಗೆ ಹಾಗೂ ಇತರ ಸಿಬ್ಬಂದ್ದಿಗಳು ಸೇರಿ ಈಗಾಗಲೇ ಸುಮಾರು ಎಂಟು ಸಾವಿರ ಮಂದಿಗೆ ತನ್ನ ಶಿವ ಸಾಗರ್ ಗ್ರೂಫ್ ಆಫ್ ಹೋಟೇಲ್ಸನ ಮೂಲಕ ಆಹಾರವನ್ನು ಇವರು ಒದಗಿಸುತ್ತಾ ಬಂದಿರುವರು.

ಇಂದಿನ ಈ ಸಂದಿಗ್ದ ಪರಿಸ್ಥಿತಿಯನ್ನು ನೋಡುವಾಗ ಈ ಸೇವೆ ಅನಿವಾರ್ಯವಾಗಿದ್ದು ಈ ಬಗ್ಗೆ ಯವುದೇ ಪ್ರಚಾರವನ್ನು ಬಯಸುವುದು ಸರಿಯಲ್ಲ ಎಂದು ನಗರದ ಭಾರತ್ ಬ್ಯಾಂಕಿನ ನಿರ್ದೇಶಕರೂ ಆದ ಎನ್. ಟಿ. ಪೂಜಾರಿಯವರು ಹೇಳುತ್ತಾರೆ. ಇಂದಿನ ಈ ಸಂಕಷ್ಟದ ಸಮಯದಲ್ಲಿ ಹೊರನಾಡಿನಲ್ಲಿ ಸದ್ದುಗದ್ದಲವಿಲ್ಲದೆ ಜನಸಾಮಾನ್ಯರ ಹಸಿವು ನೀಗಿಸುವ ಸೇವೆ ಮಾಡುತ್ತಿರುವ ಮಹಾದಾನಿ ಇವರು.

ಮಹಾನಗರದಲ್ಲಿದ್ದು ಕಾರಣಾಂತರದಿಂದ ಕರ್ನಾಟಕಕ್ಕೆ ಹೋಗಲಿಚ್ಚಿಸುವ ತುಳು-ಕನ್ನಡಿಗರಿಗೆ ಕರ್ನಾಟಕ ಸರಕಾರವು ಅನುಮತಿ ನೀಡಬೇಕೆಂದು ಎನ್. ಟಿ. ಪೂಜಾರಿಯವರು ಕರಾವಳಿಯ ಶಾಸಕರನ್ನು ಹಾಗೂ ಕರ್ನಾಟಕ ಸರಕಾರವನ್ನು ವಿನಂತಿಸಿದ್ದಾರೆ.

- Advertisement -
spot_img

Latest News

error: Content is protected !!