Thursday, June 4, 2026
Homeತಾಜಾ ಸುದ್ದಿಮುಂಬೈನಲ್ಲಿಂದು ಕರಾವಳಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ

ಮುಂಬೈನಲ್ಲಿಂದು ಕರಾವಳಿ ಬಿಜೆಪಿ ಅಭ್ಯರ್ಥಿಗಳ ಪ್ರಚಾರ

- Advertisement -
- Advertisement -

ಮುಂಬೈ: ದಕ್ಷಿಣ ಕನ್ನಡ, ಉಡುಪಿ-ಚಿಕ್ಕಮಗಳೂರು ಮತ್ತು ಕಾಸರಗೋಡು ಲೋಕಸಭಾ ಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳಿಂದ ಇಂದು ಮುಂಬೈನಲ್ಲಿ ಮತಯಾಚನೆ ನಡೆಯಿತು.

ಮುಂಬೈನ ಥಾಣೆಯಲ್ಲಿರುವ ರೈಮಂಡ್ ಮೈದಾನದಲ್ಲಿ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಮೂಲದ ಮತದಾರರನ್ನು ಇಂದು ಸಂಜೆ ಬಿಜೆಪಿ ಅಭ್ಯರ್ಥಿಗಳಾದ ಕ್ಯಾ. ಬ್ರಿಜೇಶ್ ಚೌಟ ಮತ್ತು ಕೋಟ ಶ್ರೀನಿವಾಸ ಪೂಜಾರಿ ಭೇಟಿ ಮಾಡಿದರು.

ಇದೇ ವೇಳೆ ಮುಂಬೈನ ಜೆ.ಕೆ. ಕೆಮಿಕಲ್ ಗ್ರೌಂಡ್ ನಲ್ಲಿ ಕರಾವಳಿ ಮೂಲದ ಮತದಾರರ ಸಾರ್ವಜನಿಕ ಸಮಾವೇಶ ಕೂಡಾ ನಡೆಯಿತು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಬಿಜೆಪಿ ಶಾಸಕರು ಹಾಗೂ ಕಾಸರಗೋಡು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಎಲ್. ಅಶ್ವಿನಿ ಸಮಾವೇಶದಲ್ಲಿ ಪಾಲ್ಗೊಂಡರು.

ಇಂದು ಸಂಜೆ 5 ಮತದಾರರೊಂದಿಗೆ ಬಿಜೆಪಿ ಅಭ್ಯರ್ಥಿಗಳ ಸಂವಾದ ನಡೆಯಿತು.

.

.‌

- Advertisement -

Latest News

error: Content is protected !!