Thursday, June 4, 2026
Homeತಾಜಾ ಸುದ್ದಿಬ್ಯಾಡ್ಮಿಂಟನ್ ಆಟವಾಡಿ ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ

ಬ್ಯಾಡ್ಮಿಂಟನ್ ಆಟವಾಡಿ ಮತಯಾಚನೆ ಮಾಡಿದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ

- Advertisement -
- Advertisement -

ಬೆಂಗಳೂರು: ಬ್ಯಾಡ್ಮಿಂಟನ್ ಕೋರ್ಟ್ ನಲ್ಲಿ ಬ್ಯಾಡ್ಮಿಂಟನ್ ಆಟವಾಡುವ ಮೂಲಕ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಮತ ಯಾಚನೆ ಮಾಡಿದ್ದಾರೆ.

ಬ್ಯಾಡ್ಮಿಂಟನ್ ಸ್ಟೇಡಿಯಂನಲ್ಲಿ ಕ್ರೀಡಾಪಟುಗಳ ಜೊತೆ ಬ್ಯಾಡ್ಮಿಂಟನ್ ಆಟವಾಡಿದ ಶೋಭಾ ಕರಂದ್ಲಾಜೆ ನಂತರ ಮತಯಾಚನೆ ಮಾಡಿದ್ದಾರೆ.

ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನ ನಂದಿನಿ ವಾರ್ಡ್ ನಲ್ಲಿರುವ ನವ ನಂದಿನಿ, ಅಂಬರೀಶ್ ಮತ್ತು ಸ್ವಾಮಿ ವಿವೇಕಾನಂದ ಬ್ಯಾಡ್ಮಿಂಟನ್ ‌ಕ್ರೀಡಾಂಗಣಗಳಿಗೆ ಇಂದು ಬೆಳಗ್ಗೆ ಶೋಭಾ ಕರಂದ್ಲಾಜೆ ಭೇಟಿ ನೀಡಿದ್ದರು.

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದ ಶಾಸಕ ಕೆ. ಗೋಪಾಲಯ್ಯ, ಬಿಬಿಎಂಪಿ ಮಾಜಿ ಉಪ ಮೇಯರ್ ಹೇಮಲತಾ ಗೋಪಾಲಯ್ಯ ಮತ್ತು ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್ ಈ ವೇಳೆ ಉಪಸ್ಥಿತರಿದ್ದರು.

- Advertisement -

Latest News

error: Content is protected !!