Saturday, April 27, 2024
Homeತಾಜಾ ಸುದ್ದಿ20 ಗ್ರಾಂ ತೂಕದ ಮಹಿಳೆಯ ತಾಳಿ ಸರವನ್ನು ನುಂಗಿದ ಎಮ್ಮೆ..

20 ಗ್ರಾಂ ತೂಕದ ಮಹಿಳೆಯ ತಾಳಿ ಸರವನ್ನು ನುಂಗಿದ ಎಮ್ಮೆ..

spot_img
- Advertisement -
- Advertisement -

ಮಹಾರಾಷ್ಟ್ರ; ಮಹಿಳೆಯೊಬ್ಬರ 20 ಗ್ರಾಂ ತೂಕದ 1.5 ಲಕ್ಷ ಮೌಲ್ಯದ ಮಾಂಗಲ್ಯ ಸರವನ್ನು ಎಮ್ಮೆಯೊಂದು ನುಂಗಿದ ವಿಚಿತ್ರ ಪ್ರಸಂಗ ಮಹಾರಾಷ್ಟ್ರದಲ್ಲಿ ನಡೆದಿದೆ.

ಮಹಿಳೆಯೊಬ್ಬರು ಸೋಯಾಬೀನ್ ಹಾಗೂ ಕಡಲೆಕಾಯಿ ಸಿಪ್ಪೆ ತುಂಬಿರುವ ತಟ್ಟೆಯೊಂದರಲ್ಲಿ ಒಡವೆಗಳನ್ನು ಇಟ್ಟು ಸ್ನಾನಕ್ಕೆ ತೆರಳಿದ್ದರು. ಸ್ನಾನದ ಬಳಿಕ ಮಹಿಳೆ ಕಡಲೆಕಾಯಿ ಸಿಪ್ಪೆ ತುಂಬಿರುವ ತಟ್ಟೆಯನ್ನು ಎಮ್ಮೆಯ ಮುಂದೆ ಇರಿಸಿದ್ದಾರೆ. ಆಗ ಎಮ್ಮೆಯು ಕಡಲೆಕಾಯಿ ಸಿಪ್ಪೆಯನ್ನು ತಿನ್ನಲು ತೊಡಗಿದೆ.ಕೆಲವು ಗಂಟೆಗಳ ನಂತರವಷ್ಟೇ ಆ ಮಹಿಳೆಗೆ ತನ್ನ ಒಡವೆಗಳು ಕಾಣೆಯಾಗಿರುವ ಕುರಿತು ಅರಿವಾಗಿದೆ. ಆಗ ತಾನು ಮೇವಿನೊಂದಿಗೆ ಮಂಗಳ ಸೂತ್ರವನ್ನೂ ಇರಿಸಿದ್ದನ್ನು ನೆನಪಿಸಿಕೊಂಡಿದ್ದಾರೆ. ಆ ಮಂಗಳ ಸೂತ್ರವನ್ನು ಎಮ್ಮೆಯು ನುಂಗಿದೆ ಎಂಬುದು ಮನದಟ್ಟಾದಾಗ, ಆ ಮಹಿಳೆಯು ಈ ಕುರಿತು ತನ್ನ ಪತಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ದಂಪತಿ ಪಶುವೈದ್ಯರೊಬ್ಬರನ್ನು ಸಂಪರ್ಕಿಸಿದ್ದು, ಎಮ್ಮೆಯನ್ನು ಲೋಹ ಶೋಧಕದಿಂದ ತಪಾಸಣೆ ಮಾಡಿರುವ ಆ ಪಶುವೈದ್ಯರು, ಎಮ್ಮೆಯ ಹೊಟ್ಟೆಯಲ್ಲಿ ಮಂಗಳ ಸೂತ್ರ ಇರುವುದನ್ನು ದೃಢಪಡಿಸಿದ್ದಾರೆ.

ಮರುದಿನ ಎಮ್ಮೆಗೆ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅದಕ್ಕೆ 60-65 ಹೊಲಿಗೆಗಳನ್ನು ಹಾಕಲಾಗಿದೆ. ಶಸ್ತ್ರಚಿಕಿತ್ಸೆ ಯಶಸ್ವಿಯಾದ ನಂತರ, ಎಮ್ಮೆಯ ಹೊಟ್ಟೆಯಿಂದ ಮಂಗಳ ಸೂತ್ರವನ್ನು ಹೊರ ತೆಗೆಯಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ವಾಶಿಮ್ ನ ಆರೋಗ್ಯಾಧಿಕಾರಿ ಬಾಳಾಸಾಹೇಬ್ ಕೌಂಡನೆ, “ಎಮ್ಮೆಯ ಹೊಟ್ಟೆಯಲ್ಲಿ ಯಾವುದೋ ಲೋಹವಿದೆ ಎಂಬ ಸಂಗತಿ ಪರೀಕ್ಷೆ ವೇಳೆ ಗೊತ್ತಾಗಿದೆ. ಬಳಿಕ ಎಮ್ಮೆಗೆ ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಅದಕ್ಕೆ 60-65 ಹೊಲಿಗೆಗಳನ್ನು ಹಾಕಲಾಗಿದೆ” ಎಂದು ತಿಳಿಸಿದ್ದಾರೆ.

ಪ್ರಾಣಿಗಳಿಗೆ ಮೇವನ್ನಾಗಲಿ ಅಥವಾ ಇನ್ನೇನನ್ನಾದರಾಗಲಿ ತಿನ್ನಿಸುವ ಜಾನುವಾರುಗಳ ಮಾಲೀಕರು ಒಂದಿಷ್ಟು ಎಚ್ಚರಿಕೆ ವಹಿಸಬೇಕು ಎಂದು ಕೌಂಡನೆ ಆಗ್ರಹಿಸಿದ್ದಾರೆ. “ಪ್ರಾಣಿಗಳಿಗೆ ಮೇವನ್ನು ತಿನ್ನಿಸುವಾಗ ಜನರು ಎಚ್ಚರಿಕೆಯಿಂದ ಇರಬೇಕು ಹಾಗೂ ಮೇವಿನಲ್ಲಿ ಏನೂ ಇಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಮನವಿ ಮಾಡುತ್ತೇವೆ” ಎಂದು ಅವರು ಕರೆ ನೀಡಿದ್ದಾರೆ.

- Advertisement -
spot_img

Latest News

error: Content is protected !!