Sunday, April 28, 2024
Homeಮಹಾನ್ಯೂಸ್ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನ  ಜೀರ್ಣೋದ್ಧಾರ ನಿಮಿತ್ತ ಸಮಾಲೋಚನಾ ಸಭೆ ; ಮುಂಬೈ ಸಮಿತಿಯ ರಚನೆ

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನ  ಜೀರ್ಣೋದ್ಧಾರ ನಿಮಿತ್ತ ಸಮಾಲೋಚನಾ ಸಭೆ ; ಮುಂಬೈ ಸಮಿತಿಯ ರಚನೆ

spot_img
- Advertisement -
- Advertisement -

ಮುಂಬೈ; ನೇತ್ರಾವತಿ ನದಿ ಕಿನಾರೆಯಲ್ಲಿದ್ದು, ಪುರಾಣ ಪ್ರಸಿದ್ಧ ಶಿವ ಕ್ಷೇತ್ರವಾಗಿ ಮತ್ತು ಬಹು ಕಾರ್ಣಿಕದ ಕ್ಷೇತ್ರವಾಗಿ ಗುರುತಿಸಿ ಕೊಂಡಿರುವ ಬಂಟ್ವಾಳ  ತಾಲೂಕು  ಸರಪಾಡಿ ಮತ್ತು ಮಣಿನಾಲ್ಕೂರು  ಉಭಯ ಗ್ರಾಮಗಳಿಗೆ ಸಂಬಂಧಪಟ್ಟ ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ   ಜೀರ್ಣೋದ್ಧಾರ ಸಭೆಯು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಸ್ಥಾನದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿಯವರ ಘನ ಅಧ್ಯಕ್ಷತೆಯಲ್ಲಿ  ಮುಂಬಯಿಯ ಪ್ರತಿಷ್ಠಿತ ಉದ್ಯಮಿ , ಸಮಾಜ ಸೇವಕ, ಕೊಡುಗೈದಾನಿ , ಭವಾನಿ  ಶಿಪ್ಪಿಂಗ್ ಸರ್ವಿಸಸ್ ಪ್ರೈ.ಲಿ.‌ ಆಡಳಿತ ನಿರ್ದೇಶಕರಾದ ಕುಸುಮೋದರ ಡಿ. ಶೆಟ್ಟಿಯವರ  ಮುಂದಾಳತ್ವದಲ್ಲಿ ಜು.2 ರ ರವಿವಾರ ಸಂಜೆ  ಕುರ್ಲಾ ಬಂಟರ ಭವನದ ಎನೆಕ್ಸ್ ಬಿಲ್ಡಿಂಗ್ ನ ಸಭಾಂಗಣದಲ್ಲಿ ಅರ್ಥ ಪೂರ್ಣವಾಗಿ ಗಣ್ಯಾತಿ ಗಣ್ಯರ ಉಪಸ್ಥಿತಿಯಲ್ಲಿ ಜ್ಯೋತಿ ಬೆಳಗಿಸುವುದರ ಮುಖಾಂತರ  ಜರಗಿತು.ಮತ್ತು ಇದೇ ಸಂದರ್ಭದಲ್ಲಿ  ಶ್ರೀ ಶರಭೇಶ್ವರ ಕ್ಷೇತ್ರದ ಜೀರ್ಣೋದ್ದಾರದ ಮಾರ್ಗದರ್ಶಕರೂ ಭವಾನಿ ಶಿಪ್ಪಿoಗ್  ಸರ್ವಿಸಸ್ ಇದರ ಆಡಳಿತ ನಿರ್ದೇಶಕರಾದ ಕುಸುಮೋಧರ ಡಿ.ಶೆಟ್ಟಿಯವರ ಮುಂದಾಳತ್ವದಲ್ಲಿ ಸರಪಾಡಿ ಮತ್ತು ಮಣಿನಾಲ್ಕೂರು ಗ್ರಾಮಗಳ ಹಾಗೂ ಬಂಟ್ವಾಳ ತಾಲೂಕಿನ ಆಸ್ತಿಕ ಬಾಂಧವರ ಸಹಭಾಗಿತ್ವದ ಮುಂಬಯಿ ಸಮಿತಿಯನ್ನು ರಚಿಸಿ ಈ  ಮೂಲಕ ಸರಪಾಡಿ ಕ್ಷೇತ್ರದ ಜೀರ್ಣೋದ್ದಾರ ಕಾರ್ಯದಲ್ಲಿ ಕೈ ಜೋಡಿಸುವ ಕಾರ್ಯಕ್ಕೆ ಚಾಲನೆಯನ್ನು ನೀಡಲಾಯಿತು

ಸಮಾರಂಭದ ಸಭೆಯ ಅಧ್ಯಕ್ಷ ಸ್ಥಾನದಿಂದ  ಅಣ್ಣಿ ಸಿ.ಶೆಟ್ಟಿಯವರು  ತಮ್ಮ ಅನಿಸಿಕೆಯನ್ನು ವ್ಯಕ್ತ ಪಡಿಸುತ್ತಾ ,ಹೊಸ ದೇವಸ್ಥಾನ ನಿರ್ಮಾಣ ಮಾಡುವುದಕ್ಕಿಂತ ಹಳೆಯ ಕಾಲದಿಂದ ಆರಾಧಿಸಿಕೊಂಡು ಬಂದ ದೇವರ ದೇವಾಲಯವನ್ನು ಜೀರ್ಣೋದ್ದಾರ ಮಾಡುವುದು  ಅತ್ಯುತ್ತಮ ಕಾರ್ಯವೆಂದು ಹೇಳಿದರು .ಹೊಸ ದೇವಾಲಯ ನಿರ್ಮಿಸುವುದಕ್ಕಿಂತ ಸಹಸ್ರ ಪುಣ್ಯ ಪ್ರಾಪ್ತಿ ಎನ್ನುವ ತಮ್ಮ ಅಭಿಮತವನ್ನು ತಿಳಿಸಿದರು .

ಕೆ.ಡಿ ಶೆಟ್ಟಿಯವರು ದೇವಸ್ಥಾನದ ಜೀರ್ಣೋದ್ಧಾರ ಕಾರ್ಯದಲ್ಲಿ ಸಂಪೂರ್ಣ ಸಹಕಾರದ ಭರವಸೆ ನೀಡುತ್ತಾ ,  ಕ್ಷೇತ್ರದ ಜೀರ್ಣೋದ್ದಾರದ ಮಹತ್ಕಾರ್ಯದ ಮಹತ್ವವನ್ನು ಈ ಸಂದರ್ಭದಲ್ಲಿ ವಿವರಿಸಿದರು. ನಮ್ಮ ಬದುಕಿನಲ್ಲಿ ಬಂದಿರುವ ಈ ಒಂದು ಸುವರ್ಣ ಅವಕಾಶವನ್ನು ಎಲ್ಲಾ ದಾನಿಗಳು ತನು ಮನ ಧನದ ಮೂಲಕ ಭಗವದ್ ಸೇವೆಗೆ ಸಹಕರಿಸುವಂತೆ ಎಲ್ಲರಲ್ಲೂ ವಿನಂತಿಸಿಕೊಂಡರು.

ವೇದಿಕೆಯ ಅತಿಥಿಯಾಗಿದ್ದ ಬಿ. ಯಸ್. ಕೆ. ಬಿ.ಅಸೋಸಿಯೇಷನ್ ನ ಅಧ್ಯಕ್ಷರಾದ ಸುರೇಶ್ ರಾವ್  ರವರು  ಮಾತನಾಡುತ್ತಾ ,ಸನಾತನ ಹಿಂದೂ ಧರ್ಮದಲ್ಲಿ ಧರ್ಮ ದೈವ, ದೇವರು ನಮ್ಮ ನಂಬಿಕೆಯ ಕೇಂದ್ರ ಬಿಂದುಗಳು ಅದನ್ನು ಉಳಿಸಿ ,ಬೆಳೆಸಿ ಪ್ರೋತ್ಸಾಹಿಸಬೇಕು ಎಂದು ಉತ್ತಮ ಸಲಹೆ ನೀಡಿದರು.

ಇನ್ನೋರ್ವ  ಅತಿಥಿ ಬಂಟ್ವಾಳ ತಾಲೂಕು ಬಡಗ ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಉದ್ಯಮಿ ರಘು ಎಲ್.ಶೆಟ್ಟಿಯವರು  ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ,ಧನ ಸಹಕಾರ ಮಾಡಿ ಜೀರ್ಣೋದ್ದಾರ ಕಾರ್ಯದಲ್ಲಿ ನಾವು ಒಂದೊಂದು ಕುಟುಂಬದಂತೆ ಜವಾಬ್ಧಾರಿ ವಹಿಸಿ ಕೊಂಡು ಮುಂದುವರಿಯೋಣ ಎಂದು ಸೂಚ್ಯವಾಗಿ ನುಡಿದರು.

ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಆರ್ಥಿಕ ಸಮಿತಿ ಅಧ್ಯಕ್ಷರಾದ ರಾಜ್ಯ ಪ್ರಶಸ್ತಿ ಪುರಸ್ಕೃತ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ ಶೆಟ್ಟಿಯವರು ಒಟ್ಟು ದೇವಸ್ಥಾನದ ರೂಪು ರೇಷೆ  ಈ ತನಕ ಆದ ಕಾಮಗಾರಿ ಮುಂದೆ ಆಗಬೇಕಾದ ಕಾಮಗಾರಿ ಬಗ್ಗೆ ಹೇಳುತ್ತಾ ಮುಂಬಾಯಿಯ ಸಮಿತಿ ಮೂಲಕ ನಿರೀಕ್ಷಿತ ಆರ್ಥಿಕ ಕ್ರೋಢಿಕರಣ ಆಗಬೇಕಾಗಿದೆ ಎಂದು ಪ್ರಸ್ತಾವನೆ ಮೂಲಕ ಹೇಳಿ ನೆರೆದ ಸರ್ವರ ಗಮನ ಸೆಳೆದರು.

 ಇದೇ ವೇಳೆ ಉಪಸ್ಥಿತರಿದ್ದ  ಸಾಯಿ ಪ್ಯಾಲೇಸ್ ಹೋಟೆಲ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ರವಿ ಎಸ್ ಶೆಟ್ಟಿ,ಶ್ರೀ ಅಯ್ಯಪ್ಪ ಮಂದಿರ ನೆರೂಲ್ ಇದರ ಅಧ್ಯಕ್ಷರಾದ ಸುರೇಶ್ ಜಿ. ಶೆಟ್ಟಿ, ಚಂದ್ರಹಾಸ್ ರೈ ಬೋಲ್ನಾಡುಗುತ್ತು, ಹೋಟೆಲ್ ಅಶ್ವಿತ್ ಬೆಲಾಪುರ ಇದರ ಮಾಲಕರಾದ  ಸಂಜೀವ ಎನ್. ಶೆಟ್ಟಿ,ನಮೋ ಮೊಯರ್ ಗ್ಲೋಬಲ್ ಫೌಂಡೇಶನ್ ನ ಅಧ್ಯಕ್ಷರಾದ ರವಿ ಉಚ್ಚಿಲ್ ಸೂಕ್ತ ಸಲಹೆಗಳನ್ನು ನೀಡಿದರು.

ಉದ್ಯಮಿ ರವಿ ಶೆಟ್ಟಿ ನೆರುಲ್,ಕಲ್ಲಡ್ಕ ಕರುಣಾಕರ ವಿ. ಶೆಟ್ಟಿ,  ಅಶೋಕ್ ಪಕ್ಕಳ,ಸಂಜೀವ ಶೆಟ್ಟಿ (ಕಬ್ಬಡಿ )ನ್ಯೂ ಪನ್ವೆಲ್, ಭಾಸ್ಕರ್ ಶೆಟ್ಟಿ ದಕ್ಷಿಣ್, ರವೀಶ್ ಶೆಟ್ಟಿ ನವಿಮುಂಬೈ, ಹಿರಿಯ ಹೋಟೆಲ್ ಉದ್ಯಮಿ ಪ್ರವೀಣ್ ಶೆಟ್ಟಿ, ಶಿವರಾಮ ಶೆಟ್ಟಿ ಕಾರ್ಯನಗುತ್ತು , ನವೀನ್ ಶೆಟ್ಟಿ, ಜಗನ್ನಾಥ ಜೆ .ಶೆಟ್ಟಿ, ಪ್ರಕಾಶ್ ಡಿ. ಶೆಟ್ಟಿಚೆಲ್ಲಡ್ಕ, ನಾಗೇಶ್ ಶೆಟ್ಟಿ, ಶಶಿ ಕುಮಾರ್ ಶೆಟ್ಟಿ, ಭಾಸ್ಕರ ಬಿ. ಶೆಟ್ಟಿ,ಜಗನ್ನಾಥ ಶೆಟ್ಟಿ, ಯಶವಂತ್ ಐಲ, ಜಯ ಸಿ. ಶೆಟ್ಟಿ, ನಾಗೇಶ ಶೆಟ್ಟಿ, ಪ್ರಾಣೇಶ್ ಚೆoಬೂರು ಮೊದಲಾದವರು  ತಮ್ಮ ತಮ್ಮ ಅನಿಸಿಕೆಯೊಂದಿಗೆ  ಸಮಿತಿಯ ನೂತನ. ಅಧ್ಯಕ್ಷರಾಗಿ ಅಯ್ಕೆಗೊಂಡ ಕೆ. ಡಿ. ಶೆಟ್ಟಿಯವರನ್ನು ಅಭಿನಂದಿಸಿ _ ಅವರ ಮುಂದಾಳತ್ವದಲ್ಲಿ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರಮಿಸುವ ಭರವಸೆಯನ್ನು ವ್ಯಕ್ತಪಡಿಸಿದರು .

 ವೇದಿಕೆಯಲ್ಲಿ ವಿಶೇಷವಾಗಿ ಊರಿನಿಂದ ಆಗಮಿಸಿದ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರು ವಿಠ್ಠಲ ಯಂ, ಟ್ರಷ್ಟಿ ಕೆ.ಉಮೇಶ ಆಳ್ವ,ಜೀರ್ಣೋದ್ದಾರ ಸಮಿತಿ ಉಪಾಧ್ಯಕ್ಷರು ಪುರುಷೋತ್ತಮ್ ಬಿ. ಮಜಲು,  ಸರಪಾಡಿ ಯುವಕ ಮಂಡಲದ ಅಧ್ಯಕ್ಷರು ಪಿ. ಸಂತೋಷ್ ಕುಮಾರ್  ಉಪಸ್ಥಿತರಿದ್ದರು. 

  ಸರಪಾಡಿ ವೀಣಾ ದೀಪಕ್ ಸುವರ್ಣ ಇವರ ಪ್ರಾರ್ಥನೆ ಅತಿಥಿ ಗಣ್ಯರ ಹಸ್ತದಿಂದ ದೀಪ ಪ್ರಜ್ವಲನೆ ಯೊಂದಿಗೆ ಈ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು .   ಕಾರ್ಯಕ್ರಮವನ್ನು  ಕಲಾ ಸಂಘಟಕ ಕರ್ನೂರು  ಮೋಹನ್ ರೈ ಯವರು ನಿರೂಪಿದರು .  ಭಾಸ್ಕರ್ ಸರಪಾಡಿಯವರು ವಂದಿಸಿದರು ಕಾರ್ಯಕ್ರಮದ ಕೊನೆಯಲ್ಲಿ  ಪಡ್ಡಾಯಿಬೆಟ್ಟು ಎಚ್ .ಪದ್ಮನಾಭ ಶೆಟ್ಟಿ ಸರಪಾಡಿ ಇವರ ವತಿಯಿಂದ  ಉಪಹಾರದ ವ್ಯವಸ್ಥೆಯನ್ನು ಮಾಡಲಾಗಿತ್ತು.

ನೂತ‌ನವಾಗಿ  ರಚಿಸಲಾದ ಮುಂಬಯಿ ಸಮಿತಿಯ ವಿವರ

 ಕುಸುಮಾಧರ ಡಿ. ಶೆಟ್ಟಿ,ಚೆಲ್ಲಡ್ಕ  ( ಅಧ್ಯಕ್ಷರು )

 ಚೆoಬೂರು ಬಾಲಕೃಷ್ಣ ಪೂಜಾರಿ ನೈಬೇಲು,

  ಜಯರಾಮ ಶೆಟ್ಟಿ ಮುನ್ನಲಾಯಿ ಗುತ್ತು (ಉಪಾಧ್ಯಕ್ಷರು )

 ಕರ್ನೂರು ಮೋಹನ್ ರೈ. ( ಗೌರವ ಪ್ರಧಾನ ಕಾರ್ಯದರ್ಶಿಗಳು )

ಪಡ್ಡಾಯಿಬೆಟ್ಟು ಪದ್ಮನಾಭ ಯಸ್. ಶೆಟ್ಟಿ ಸರಪಾಡಿ.       ( ಜೊತೆ ಕಾರ್ಯದರ್ಶಿ )

 ಶಶಿಧರ ಬಂಗೇರ ಪಟ್ಲಕೆರೆ (ಕೋಶಾಧಿಕಾರಿ)

ಸರಪಾಡಿ ವೀಣಾ  ದೀಪಕ್  ಸುವರ್ಣ.(ಜೊತೆ .ಕೋಶಾಧಿಕಾರಿ)

    :– ಸಂಘಟಣಾ ಕಾರ್ಯದರ್ಶಿಗಳು :–

 ಕಲ್ಕೋಟೆ ಶಶಿ ಕುಮಾರ್ ಶೆಟ್ಟಿ ಪನ್ವೆಲ್.

ಕಲ್ಯಾಣ್ ಶಂಕರ ಶೆಟ್ಟಿ ಮುನ್ನಲಾಯಿ ಗುತ್ತು

ಕಸ್ಟಮ್ಸ್ ಸುರೇಶ್ ಶೆಟ್ಟಿ ನಡುಮೊಗರು,

ಅಶೋಕ್ ಪಕ್ಕಳ

     :—-ಸದಸ್ಯರುಗಳು:—

ಭೀವಂಡಿ ಆನಂದ್  ಯಸ್.ಪೂಜಾರಿ ದರ್ಖಸ್ 

ರವಿ ಪೂಜಾರಿ ಮೀರಾ ರೋಡ್

ದಹಿಸರ್  ಶಿವಶಂಕರ್ ಪೂಜಾರಿ ಪುನ್ಕೇದಡಿ

ಸತೀಶ್ ಪೂಜಾರಿ ಉಜಿರಾಡಿಗುತ್ತು.ಅಲ್ಲಿಪಾದೆ

ಹರೀಶ್  ಜೆ ಶೆಟ್ಟಿ ಆರ್ಮುಡಿ,

ಡೊಂಬಿವಿಲಿ ಪ್ರವೀಣ್ ನಾಯ್ಕ್.ಇಳಿಯೂರು.

ಉದ್ಯಮಿ ನವೀನ್ ಶೆಟ್ಟಿ ಮಾನಸ ಸರೋವರ

ಶ್ರೀಮತಿ ದ್ರಶ್ಯ ಕೀರ್ತನ್ ಶೆಟ್ಟಿ.

ಬಾಯoದರ್ ನಾಗೇಶ್ ಶೆಟ್ಟಿ,ಅಜಿಲಮೊಗರು

ಪ್ರಾಣೇಶ್ ಚೆoಬೂರು .

ಪ್ರವೀಣ್ ಶೆಟ್ಟಿ ಅಜಿಲಮೊಗರು

- Advertisement -
spot_img

Latest News

error: Content is protected !!