Thursday, June 25, 2026
Homeತಾಜಾ ಸುದ್ದಿಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್

ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಅಜಿತ್ ಪವಾರ್

- Advertisement -
- Advertisement -

ಮಹಾರಾಷ್ಟ್ರ;ಹಠಾತ್ ಬೆಳವಣಿಗೆಯಲ್ಲಿ, ಅಜಿತ್ ಪವಾರ್ ಮತ್ತೆ ರಾಜ್ಯ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಮೂಲಕ ಪವಾರ್ ಬಿಜೆಪಿಯ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಈ ಹುದ್ದೆಯನ್ನ ಹಂಚಿಕೊಳ್ಳಲಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನದಿಂದ ಕೆಳಗಿಳಿಯುವ ಬಯಕೆಯನ್ನ ಶರದ್ ಪವಾರ್ ಸಾರ್ವಜನಿಕವಾಗಿ ವ್ಯಕ್ತಪಡಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಇದಕ್ಕೂ ಮುನ್ನ ಎನ್ಸಿಪಿ ಶಾಸಕರ ಗುಂಪು ಅಜಿತ್ ಪವಾರ್ ಅವರ ಮುಂಬೈ ನಿವಾಸದಲ್ಲಿ ಸಭೆ ಸೇರಿ, ಪಕ್ಷದ ಕಾರ್ಯಕಾರಿ ಅಧ್ಯಕ್ಷೆ ಸುಪ್ರಿಯಾ ಸುಳೆ ಮತ್ತು ಹಿರಿಯ ಮುಖಂಡ ಛಗನ್ ಭುಜ್ಬಲ್ ಕೂಡ ಹಾಜರಿದ್ದರು. ಆದ್ರೆ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಜಯಂತ್ ಪಾಟೀಲ್ ಅವರು ಸಭೆಯಲ್ಲಿ ಹಾಜರಿರಲಿಲ್ಲ.

- Advertisement -

Latest News

error: Content is protected !!