Wednesday, June 3, 2026
Homeತಾಜಾ ಸುದ್ದಿಹಾಸನ ಪೆನ್ ಡ್ರೈವ್ ಪ್ರಕರಣ; ಮಾಜಿ ಸಚಿವ ಹೆಚ್ ಡಿ ರೇವಣ್ಣ ಮೊದಲ ಪ್ರತಿಕ್ರಿಯೆ ಏನು?

ಹಾಸನ ಪೆನ್ ಡ್ರೈವ್ ಪ್ರಕರಣ; ಮಾಜಿ ಸಚಿವ ಹೆಚ್ ಡಿ ರೇವಣ್ಣ ಮೊದಲ ಪ್ರತಿಕ್ರಿಯೆ ಏನು?

- Advertisement -
- Advertisement -

ಬೆಂಗಳೂರು: ಹಾಸನ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.ಇದೆಲ್ಲಾ ಷಡ್ಯಂತ್ರ, ಇದಕ್ಕೆಲ್ಲಾ ಹೆದರಿ ಓಡಿ ಹೋಗಲ್ಲ. ಕಾನೂನು ಹೋರಾಟ ಮಾಡ್ತಿನಿ. ನನ್ನ ವಿರುದ್ಧ ನೀಡಿದ ದೂರಿನ ಬಗ್ಗೆ, ಯಾವುದೇ ಪ್ರತಿಕ್ರಿಯೆ ಕೊಡಲ್ಲ. ಸರ್ಕಾರ ಎಸ್‌ಐಟಿಗೆ ವಹಿಸಿದೆಯಲ್ಲಾ, ಎಸ್‌ಐಟಿ ತನಿಖೆ ಮಾಡಲಿ ಎಂದು ಹೇಳಿದ್ದಾರೆ.

ಆ ವಿಡಿಯೋಗಳು ನಾಲ್ಕು-ಐದು ವರ್ಷ ಹಳೆಯದು . ಎಫ್ ಐ ಆರ್ ದಾಖಲಾಗಿದೆ ಅಂತಾ ನಾನು ಹೆದರಿ ಓಡಿ ಹೋಗಲ್ಲ ಎಂದಿದ್ದಾರೆ. ಪ್ರಜ್ವಲ್ ರೇವಣ್ಣನೂ ಎಲ್ಲೂ ಓಡಿ ಹೋಗಿಲ್ಲ.ಪ್ರಜ್ವಲ್ ಮಾಮೂಲಿಯಾಗಿ ಜರ್ಮನಿಗೆ ಹೋಗಿದ್ದಾನೆ ಎಂದ ಅವರು ಎಫ್ ಐ ಆರ್ ಆಗುತ್ತೆ, ಎಸ್ ಐ ಟಿ ಮಾಡ್ತಾರೆ ಅಂತಾ ಅವರಿಗೆ ಗೊತ್ತಿತ್ತಾ.?ಗೊತ್ತಿದ್ರೆ ಹೋಗ್ತಿರ್ಲಿಲ್ಲ, ತನಿಖೆಗೆ ಕರೆದ್ರೆ ಬರ್ತಾನೆ ಎಂದಿದ್ದಾರೆ.

ದೇವೇಗೌಡರ ಕುಟುಂಬದ ವಿರುದ್ಧ ಷಡ್ಯಂತ್ರ ಹೊಸದಲ್ಲ.ಇಂತಹ ಹಲವು ತನಿಖೆ ನಾವು ಎದುರಿಸಿದ್ದೇವೆ ಎಂದು ರೇವಣ್ಣ ಹೇಳಿದ್ದಾರೆ.

- Advertisement -

Latest News

error: Content is protected !!