ಮೂರು ತಿಂಗಳ ವಿದ್ಯುತ್ ಬಿಲ್ ಕಟ್ಟಲು ವಿನಾಯ್ತಿ ನೀಡಲಾಗಿದೆ. ಕೊರೊನಾ ವೈರಾಸ್ ಕಾರಣ ಹಿನ್ನೆಲೆಯಲ್ಲಿ ಭಾರತ ಲಾಕ್‍ಡಾನ್ ಆಗಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಪಾವತಿಗೆ ಎಲ್ಲ ರಾಜ್ಯಗಳಿಗೆ ಮೂರು ತಿಂಗಳ ವಿನಾಯ್ತಿ ನೀಡಬೇಕೆಂದು ಕೇಂದ್ರ ಸರ್ಕಾ ರ ಸೂಚನೆ ನೀಡಿದೆ.
ಈ ಹಿನ್ನೆಲೆಯಲ್ಲಿ ಗ್ರಾಹಕರಿಗೆ ವಿದ್ಯುತ್ ಬಿಲ್ ಕಟ್ಟಲು ಮೂರು ತಿಂಗಳ ಕಾಲಾವಕಾಶ ಸಿಗಲಿದೆ. ಈ ಅವಧಿಯಲ್ಲಿ ಯಾವುದೇ ದಂಡ ವಿಧಿಸುವುದಿಲ್ಲ. ಮೂರು ತಿಂಗಳ ನಂತರ ವಿದ್ಯುತ್ ಬಿಲ್‍ನ್ನು ಪಾವತಿಸಬೇಕಿದೆ.ನಿನ್ನೆಯಷ್ಟೇ ಕೇಂದ್ರ ಸರ್ಕಾರ ಎಲ್ಲ ಸಾಲಗಳ ಮೇಲಿನ ಕಂತು ಕಟ್ಟಲು ಮೂರು ತಿಂಗಳ ವಿನಾಯ್ತಿ ನೀಡಿದ ಬೆನ್ನಲೇ ವಿದ್ಯುತ್ ಬಿಲ್ ಪಾವತಿಗೆ ಮೂರು ತಿಂಗಳ ವಿನಾಯ್ತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ.
ಹೀಗಾಗಿ ವಿದ್ಯುತ್ ಗ್ರಾಹಕರಿಗೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಇದು ವಿನಾಯ್ತಿ ಅಷ್ಟೇ. ಮನ್ನಾ ಅಲ್ಲ. ಗ್ರಾಹಕರು ಇದನ್ನು ಮನಗಾಣಬೇಕು. ಲಾಕ್‍ಡೌನ್ ಆಗಿರುವ ಸಂದರ್ಭದಲ್ಲಿ ವಿದ್ಯುತ್‍ನ್ನು ಬೇಕಾಬಿಟ್ಟಿ ಬಳಸಿದರೆ ಮೂರು ತಿಂಗಳ ನಂತರ ಹೆಚ್ಚು ಬಿಲ್ ಪಾವತಿ ಮಾಡಬೇಕಾಗುತ್ತದೆ.