Tuesday, September 10, 2024
Homeಮನರಂಜನೆಮುಂದಿನ ವಾರಕ್ಕೆ ಪ್ರಸಾರ ನಿಲ್ಲಿಸಲಿರುವ ಧಾರವಾಹಿಗಳು

ಮುಂದಿನ ವಾರಕ್ಕೆ ಪ್ರಸಾರ ನಿಲ್ಲಿಸಲಿರುವ ಧಾರವಾಹಿಗಳು

spot_img
- Advertisement -
- Advertisement -

ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಚಿತ್ರೀಕರಣ ನಡೆಯದೇ ಧಾರವಾಹಿಗಳು ಮುಂದಿನ ವಾರಕ್ಕೆ ಹೊಸ ಎಪಿಸೋಡ್ ಗಳ ಪ್ರಸಾರ ನಿಲ್ಲಿಸಲಿವೆ. ಜೊತೆ ಜೊತೆಯಲಿ ಧಾರವಾಹಿ ಈಗಾಗಲೇ ಈ ಬಗ್ಗೆ ಪ್ರಕಟಣೆ ನೀಡಿದೆ. ಏಪ್ರಿಲ್ 3 ರವರೆಗೆ ಮಾತ್ರ ಹೊಸ ಎಪಿಸೋಡ್ ಗಳು ಪ್ರಸಾರವಾಗಲಿದೆ. ಅಲ್ಲಿಯವರೆಗೆ ಮಾತ್ರ ಚಿತ್ರೀಕರಣ ನಡೆಸಿದ್ದೇವೆ. ಮುಂದೇನು ಮಾಡಬೇಕು ಎಂಬುದನ್ನು ಜೀ ವಾಹಿನಿ ನಿರ್ಧರಿಸಲಿದೆ ಎಂದು ನಟ ಅನಿರುದ್ಧ್ ಹೇಳಿದ್ದಾರೆ.

ಇನ್ನೊಂದೆಡೆ, ಗಟ್ಟಿಮೇಳ ಧಾರವಾಹಿ ತಂಡದಿಂದಲೂ ಇದೇ ಸುದ್ದಿ ಬಂದಿದೆ. ಏಪ್ರಿಲ್ 3 ವರೆಗೆ ಮಾತ್ರ ಶೂಟಿಂಗ್ ಮಾಡಿಕೊಳ್ಳಲಾಗಿದೆ. ಅದಾದ ಬಳಿಕ ಹಳೇ ಎಪಿಸೋಡ್ ಗಳ ಪ್ರಸಾರ ಮಾಡಬೇಕಷ್ಟೇ ಎಂದು ಧಾರವಾಹಿ ಮೂಲಗಳು ಹೇಳಿವೆ. ಹೀಗಾಗಿ ಇದಾದ ಬಳಿಕ ಚಾನೆಲ್ ಏನು ಪ್ರಸಾರ ಮಾಡುತ್ತದೆ ಎಂಬುದು ಸದ್ಯದ ಕುತೂಹಲ.

- Advertisement -
spot_img

Latest News

error: Content is protected !!