- Advertisement -
- Advertisement -
ಮಂಗಳೂರು : ಕೊರೊನ ವೈರಸ್ ನ ಹಾವಳಿಯಿಂದಾಗಿ ದೇಶದೆಲ್ಲೆಡೆ ಜನ ಜೀವನ ದುಸ್ಥಿರವಾಗಿದ್ದು, ಇದರಿಂದ ಹಾಲು ಸರಬರಾಜಿಗೆ ಕಷ್ಟವಾಗುತ್ತಿದೆ. ಮತ್ತು ಶೇಖರಣೆಯಾದ ಹಾಲು ಮಾರಾಟವಾಗದೇ ಬಾಕಿಯಾಗುತ್ತಿದೆ . ಈ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಹಾಲಿನ ಡಿಪ್ಪೋಗಳಿಂದ ಇಂದು ಸಂಜೆ (ಮಾರ್ಚ್ 28) ಯಿಂದ ಹಾಲು ಖರೀದಿ ಮಾಡದೆ ಇರಲು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಹಾಲು ಉತ್ಪಾದಕರ ಒಕ್ಕೂಟ ನಿರ್ಧರಿಸಿದೆ. ಇಂದು ಮಾತ್ರವಲ್ಲದೆ ಮಾರ್ಚ್ 29 ಮತ್ತು 30 ರಂದು ಕೂಡ ಹಾಲು ಖರೀದಿ ಮಾಡುವುದಿಲ್ಲ ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ಕೆ ರವಿರಾಜ್ ಹೆಗ್ಡೆ ಮತ್ತು ಎಂ.ಡಿ ಜಿವಿ ಹೆಗ್ಡೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ
- Advertisement -