- Advertisement -
- Advertisement -
ತೆಕ್ಕಾರು: ಉಪ್ಪಿನಂಗಡಿಯಿಂದ ಬಾಜಾರ ಸಂಪರ್ಕ ಕಲ್ಪಿಸುವ ಎಲ್ಲಾ ಪ್ರಮುಖ ರಸ್ತೆಗಳು ಹಾಗೂ ಎಲ್ಲಾ ಕಿರು ರಸ್ತೆಗಳನ್ನು ಸರಳಿಕಟ್ಟೆ ಎಂಬಲ್ಲಿ ತೆಕ್ಕಾರು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಮತ್ತು ಗ್ರಾಮ ಪಂಚಾಯತ್ ಸದಸ್ಯರ ನೇತೃತ್ವದಲ್ಲಿ ಮಣ್ಣು ಹಾಕಿ ರಸ್ತೆ ಸಂಪರ್ಕ ಸ್ಥಗಿತಗೊಳಿಸಲಾಗಿದೆ ಆದುದರಿಂದ ತೆಕ್ಕಾರು ಗ್ರಾಮದ ಎಲ್ಲಾ ಗ್ರಾಮಸ್ಥರು ಸಹಕರಿಸ ಬೇಕೆಂದು ಪಂಚಾಯತ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ವೈದ್ಯಕೀಯ ತುರ್ತು ಸೇವೆಗಾಗಿ ತೆಕ್ಕಾರು ಪಂಚಾಯತ್ ವತಿಯಿಂದ ವಾಹನ ಸೌಲಭ್ಯ ಕಲ್ಪಿಸಲಾಗಿದೆ. ಆದರೆ ಪಂಚಾಯತ್ ನ ಈ ನಡೆಗೆ ಸಾರ್ವಜನಿಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ತಾಲೂಕು ಆಡಳಿತ ಯಾವುದೇ ರಸ್ತೆಗೆ ಮಣ್ಣು ಹಾಕಿಲ್ಲ ಮತ್ತು ಹಾಕಲು ಅನುಮತಿ ನೀಡಿಲ್ಲ. ಈ ಬಗ್ಗೆ ತಕ್ಷಣವೇ ಅಧಿಕಾರಿಗಳಿಂದ ಮಾಹಿತಿ ಪಡೆದು ಕಾನೂನು ಕ್ರಮ ಕೈಗೊಳ್ಳಾಗುವುದು ಎಂದರು.
- Advertisement -