- Advertisement -
- Advertisement -
ಕಾರವಾರ: ಜಗತ್ತಿನಾಧ್ಯಂತ ಅನೇಕ ಜನರನ್ನು ಬಾಧಿಸುತ್ತಿರುವ ಕೋರೋನ ಚಿಕಿತ್ಸೆಗೆ ಕರ್ನಾಟಕ ಸರ್ಕಾರದ ಕೋರಿಕೆಯ ಮೇರೆಗೆ ಕಾರವಾರದಲ್ಲಿ ಭಾರತೀಯ ನೌಕಾ ಸೇನೆಯು ಸುಸಜ್ಜಿತ ಸೇನಾ ನೌಕಾ ನೆಲೆ ಆಸ್ಪತ್ರೆಯನ್ನು ನಿರ್ಮಿಸಿದೆ .
ಇದರಲ್ಲಿ ಎಲ್ಲಾ ಅತ್ಯಾಧುನಿಕ ಸೌಲಭ್ಯದೊಂದಿಗೆ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ಸೇನಾ ತಂಡವೊಂದು ನಿರಂತರ ಸೇವೆಗೆ ತಯಾರಾಗಿದೆ. ಇದು ಉತ್ತರಕನ್ನಡ ಜಿಲ್ಲಾಡಳಿತ ,ಕರ್ನಾಟಕ ಸರ್ಕಾರ ಮತ್ತು ಭಾರತೀಯ ನೌಕಾ ಪಡೆ ಜಂಟಿಯಾಗಿ ನಿರ್ಮಿಸಿದ ಪ್ರಪ್ರಥಮ ಸೇನಾ ಆರೋಗ್ಯ ಕೇಂದ್ರವಾಗಿದೆ ಎಂದು ನೌಕಾ ಪಡೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
- Advertisement -