Friday, June 5, 2026
Homeಪ್ರಮುಖ-ಸುದ್ದಿಸದ್ಯಕ್ಕೆ ಬೆಂಗಳೂರು ಲಾಕ್ ಡೌನ್ ಇಲ್ಲ- ಸಚಿವ ಆರ್. ಅಶೋಕ್

ಸದ್ಯಕ್ಕೆ ಬೆಂಗಳೂರು ಲಾಕ್ ಡೌನ್ ಇಲ್ಲ- ಸಚಿವ ಆರ್. ಅಶೋಕ್

- Advertisement -
- Advertisement -

ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಜನನಿಬಿಡ ಎಂದು ಗುರುತಿಸಲ್ಪಟ್ಟ ಅನೇಕ ಪ್ರದೇಶಗಳು ಈಗಾಗಲೇ ಸೀಲ್ ಡೌನ್ ಆಗಿದೆ. ಕಲಾಸಿಪಾಳ್ಯ, ಕೆ ಆರ್ ಮಾರುಕಟ್ಟೆ, ಚಿಕ್ಕಪೇಟೆ ಮುಂತಾದ ಏರಿಯಾಗಳಲ್ಲಿ ಕೊರೊನಾ ಸೋಂಕಿತರು ಸಾಕಷ್ಟು ಸಂಖ್ಯೆಯಲ್ಲಿ ಕಂಡು ಬಂದಿರೋದರಿಂದ ಈಗಾಗಲೇ ಈ ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗಿದೆ. ಇನ್ನು ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರೋದರಿಂದ ಬೆಂಗಳೂರನ್ನು ಲಾಕ್ ಡೌನ್ ಮಾಡುತ್ತಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಈ ಬಗ್ಗೆ ಇವತ್ತು ಸಿಎಂ ನೇತೃತ್ವದಲ್ಲಿ ಸಭೆ ಕೂಡ ನಡೆದಿತ್ತು. ಇದೀಗ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಕಂದಾಯ ಸಚಿವ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಸಚಿವ ಆರ್. ಅಶೋಕ್ ಸದ್ಯಕ್ಕೆ ಬೆಂಗಳೂರಿನಲ್ಲಿ ಲಾಕ್ ಡೌನ್ ಇಲ್ಲ. ಯಾವ ಏರಿಯಾಗಳಲ್ಲಿ ಹೆಚ್ಚು ಕೊರೊನಾ ಕೇಸುಗಳು ಪತ್ತೆಯಾಗಿವೆ ಆ ಏರಿಯಾಗಳನ್ನಷ್ಟೇ ಸೀಲ್ ಡೌನ್ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಹಾಗೇ ಕೊರೊನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!