Wednesday, May 15, 2024
Homeಕರಾವಳಿಮಂಗಳೂರುಕುಕ್ಕೆ ದೇಗುಲದ ಸಂಪ್ರದಾಯ ಮುರಿದವರ ವಿರುದ್ಧ ದೂರು

ಕುಕ್ಕೆ ದೇಗುಲದ ಸಂಪ್ರದಾಯ ಮುರಿದವರ ವಿರುದ್ಧ ದೂರು

spot_img
- Advertisement -
- Advertisement -

ಸುಬ್ರಮಣ್ಯ : ಜೂನ್ 8 ರಂದು ಕುಕ್ಕೆ ಸುಬ್ರಮಣ್ಯ ದೇಗುಲದಲ್ಲಿ ಮಧ್ಯಾಹ್ನ ನಡೆಯಬೇಕಾಗಿದ್ದ ಪೂಜೆಯನ್ನು ಬೆಳಗ್ಗೆ ಮಾಡಿಸಿ ದೇವಸ್ಥಾನದ ಸಂಪ್ರದಾಯ, ರೀತಿ ನೀತಿ, ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿತ್ತು. ಇದೀಗ ಆ ದಿನ ಮಧ್ಯಾಹ್ನದ ಪೂಜೆಯನ್ನು ಬೆಳಗ್ಗೆ ಮಾಡಿಸಿದ ಅರ್ಚಕರ ವಿರುದ್ಧ ಕ್ರಮಕ್ಕೆ ದೇವಸ್ಥಾನದ ಭಕ್ತ ಹಿತರಕ್ಷಣಾ ವೇದಿಕೆಯವರು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ದೇಗುಲದ ಕಾರ್ಯ ನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಇಷ್ಟು ದಿನ ದೇವಸ್ಥಾನದಲ್ಲಿದ್ದ ಸಂಪ್ರದಾಯ ಹಾಗೂ ಶಿಷ್ಟಾಚಾರವನ್ನು ಅರ್ಚಕರು ಉಲ್ಲಂಘಿಸಿದ್ದಾರೆ. ಈ ಮೂಲಕ ಭಕ್ತರ ಭಾವನೆಗಳಿಗೆ ನೋವು ಉಂಟು ಮಾಡಿದ್ದಾರೆ. ಹಾಗಾಗಿ ಈ ಕೂಡಲೇ ಆ ಅರ್ಚಕರ ವಿರುದ್ಧ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೇ ಇದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

- Advertisement -
spot_img

Latest News

error: Content is protected !!