Friday, May 3, 2024
Homeಕರಾವಳಿಸುಬ್ರಹ್ಮಣ್ಯದಲ್ಲಿ ಪತಿ ಹಾಗೂ ಮಾವನ ವಿರುದ್ಧ ಮಹಿಳೆಯಿಂದ ದೂರು

ಸುಬ್ರಹ್ಮಣ್ಯದಲ್ಲಿ ಪತಿ ಹಾಗೂ ಮಾವನ ವಿರುದ್ಧ ಮಹಿಳೆಯಿಂದ ದೂರು

spot_img
- Advertisement -
- Advertisement -

ಸುಬ್ರಹ್ಮಣ್ಯ : ಇಲ್ಲಿನ ಏನೆಕಲ್ಲು ಗ್ರಾಮದ ಬನ ಎಂಬಲ್ಲಿಯ ನಿವಾಸಿಯಾಗಿರುವ ಸುಮಿತ್ರಾ ಎಂಬ ಮಹಿಳೆ ತನ್ನ ಪತಿ ಹಾಗೂ ಮಾವನ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ. ಪತಿ ವಿಶ್ವನಾಥ ಗೌಡ ಹಾಗೂ ಮಾವ ದೊಡ್ಡಣ್ಣ ಗೌಡ ವಿರುದ್ದ ಮಹಿಳೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನನ್ನ ಪತಿ ಹಾಗೂ ಮಾವ, ನಾನು ಮನೆಗೆ ಬರದಂತೆ ತಡೆದು, ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ನನ್ನ ಪತಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಹಲ್ಲೆಗೊಳಗಾದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಈ ಬಗ್ಗೆ ಸುಬ್ಮಹ್ಮಣ್ಯ ಠಾಣಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

- Advertisement -
spot_img

Latest News

error: Content is protected !!