Saturday, April 20, 2024
Homeಕರಾವಳಿಮಂಗಳೂರುಮಂಗಳೂರಿನ ಐವರು ವೈದ್ಯರಲ್ಲಿ ಕೊರೊನಾ ಸೋಂಕು

ಮಂಗಳೂರಿನ ಐವರು ವೈದ್ಯರಲ್ಲಿ ಕೊರೊನಾ ಸೋಂಕು

spot_img
- Advertisement -
- Advertisement -

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕೆಲವೊಂದು ಸೋಂಕಿತರಿಗೆ ಕೊರೊನಾ ಪಾಸಿಟಿವ್ ಹೇಗೆ ಬಂತು ಅನ್ನೋದನ್ನು ಮತ್ತೆ ಹಚ್ಚೋದೇ ಇದೀಗ ಬಹು ದೊಡ್ಡ ತಲೆನೋವಾಗಿದೆ. ನಿನ್ನೆಯಷ್ಟೇ ಉಳ್ಳಾಲ ಎಸ್ಸೈಗೆ ಕೊರೊನಾ ಪಾಸಿಟಿವ್ ಆದ ಬಗ್ಗೆ ವರದಿಯಾಗಿತ್ತು. ಇದೀಗ ವೈದ್ಯರ ಸರದಿ.

ಕೊರೊನಾ ಸೋಂಕಿತರಿಗಾಗಿ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೆಲಸ ಮಾಡುತ್ತಿರುವ ಕೊರಾನಾ ವಾರಿಯರ್ಸ್ ಗಳಾದ ವೈದ್ಯರನ್ನು ಇದೀಗ ಕೋವಿಡ್ -19 ಟಾರ್ಗೆಟ್ ಮಾಡಿದಂತಿದೆ. ನಿನ್ನೆಯಷ್ಟೇ ಕೊಡಗಿನ ಐವರು ವೈದ್ಯರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಇವತ್ತು ಮಂಗಳೂರಿನ 5 ವೈದ್ಯರಿಗೆ ಕೊರಾನಾ ಪಾಸಿಟಿವ್ ಆಗಿದೆ. ಅಂದ್ಹಾಗೆ ಈ ಐವರು ವೈದ್ಯರುಗಳು ಕೋವಿಡ್ ಆಸ್ಪತ್ರೆ, ಲೇಡಿಗೋಷನ್ ಆಸ್ಪತ್ರೆ ಮತ್ತು ಕೆಎಂಸಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೊಂಕು ದೃಢಪಟ್ಟಿರುವ ವೈದ್ಯರಲ್ಲಿ 4 ಮಂದಿ ಮಹಿಳಾ ವೈದ್ಯರುಗಳೇ ಆಗಿದ್ದಾರೆ. ಒಬ್ಬರು ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಈಗಾಗಲೇ ಜಿಲ್ಲೆಯಲ್ಲಿ 30 ಜನ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ.

- Advertisement -
spot_img

Latest News

error: Content is protected !!