Wednesday, May 8, 2024
Homeಕರಾವಳಿಹಿಂದೂಯೇತರ ವ್ಯಾಪಾರಿಗಳ ನಿರ್ಬಂಧದ ಬಳಿಕ ಮತ್ತೊಂದು ಬೆಳವಣಿಗೆ: ಸೌತಡ್ಕ ದೇವಸ್ಥಾನಕ್ಕೆ ಹಿಂದೂಯೇತರ ವಾಹನಗಳ ಪ್ರವೇಶಕ್ಕೆ ನಿರ್ಬಂಧ

ಹಿಂದೂಯೇತರ ವ್ಯಾಪಾರಿಗಳ ನಿರ್ಬಂಧದ ಬಳಿಕ ಮತ್ತೊಂದು ಬೆಳವಣಿಗೆ: ಸೌತಡ್ಕ ದೇವಸ್ಥಾನಕ್ಕೆ ಹಿಂದೂಯೇತರ ವಾಹನಗಳ ಪ್ರವೇಶಕ್ಕೆ ನಿರ್ಬಂಧ

spot_img
- Advertisement -
- Advertisement -

ಸೌತಡ್ಕ: ಹಿಂದೂಯೇತರ ವ್ಯಾಪಾರಿಗಳ ನಿರ್ಬಂಧದ ಬಳಿಕ ಮತ್ತೊಂದು ಬೆಳವಣಿಗೆಯ ನಂತರ ಸೌತಡ್ಕ ದೇವಸ್ಥಾನದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ದೇಗುಲಕ್ಕೆ ಹಿಂದೂಯೇತರ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.

ಹಿಂದೂಯೇತರ ಧರ್ಮದ ಜನ ದೇಗುಲಕ್ಕೆ ಹಿಂದೂ ಭಕ್ತರನ್ನು ಕರೆ ತರುವ ನೆಪದಲ್ಲಿ ಲವ್ ಜಿಹಾದ್ ನಂತಹ ಕೃತ್ಯಗಳನ್ನು ಎಸಗುತ್ತಿದ್ದಾರೆ. ಹಾಗಾಗಿ ಇನ್ಮೇಲೆ ಹಿಂದೂಯೇತರ ಧರ್ಮದವರ ವಾಹನಗಳಿಗೆ ಪ್ರವೇಶವಿಲ್ಲ ಎಂದು ಬ್ಯಾನರ್ ಅಳವಡಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ಸೌತಡ್ಕ ದೇಗುಲಕ್ಕೆ ಬಂದ ಯುವತಿಯನ್ನು ಅನ್ಯಧರ್ಮೀಯ ಯುವಕನೊಬ್ಬ ವಿವಾಹವಾಗಿದ್ದಾನೆ ಎಂಬ ಸುದ್ದಿ ಎಲ್ಲೆಡೆ ಕೇಳಿ ಬಂದಿತ್ತು. ಅಲ್ಲದೇ ಇದೇ ಘಟನೆ ಕೊಕ್ಕಡದಲ್ಲಿ ಕೋಮು ಸಂಘರ್ಷಕ್ಕೂ ಕಾರಣವಾಗಿತ್ತು. ಈ ಹಿನ್ನೆಲೆ  ಹಿಂದೂಪರ ಸಂಘಟನೆಗಳು ಈ ನಿರ್ಧಾರ ತೆಗೆದುಕೊಂಡಿವೆ ಎನ್ನಲಾಗಿದೆ.

ಅಲ್ಲದೇ ಇನ್ನು ಕೂಡ ಇಂತಹ ಮರುಕಳಿಸಿದರೆ ಎಲ್ಲಾ ಧಾರ್ಮಿಕ ಕ್ಷೇತ್ರಗಳಲ್ಲೂ ಹಿಂದೂಯೇತರ ಧರ್ಮದವರ ವಾಹನಗಳಿಗೆ ನಿರ್ಬಂಧ ಹೇರಲಾಗುವುದು ಎಂದು ಎಚ್ಚರಿಕೆ ಕೂಡ ನೀಡಲಾಗಿದೆ.

- Advertisement -
spot_img

Latest News

error: Content is protected !!