Wednesday, June 24, 2026
Homeತಾಜಾ ಸುದ್ದಿಗೂಡ್ಸ್ ಲಾರಿ ಹಾಗೂ ಖಾಸಗಿ ಬಸ್ ಮಧ್ಯೆ ಅಪಘಾತ: ಬಸ್ ಹೊತ್ತಿ ಉರಿದು ನಾಲ್ವರು ಪ್ರಯಾಣಿಕರು...

ಗೂಡ್ಸ್ ಲಾರಿ ಹಾಗೂ ಖಾಸಗಿ ಬಸ್ ಮಧ್ಯೆ ಅಪಘಾತ: ಬಸ್ ಹೊತ್ತಿ ಉರಿದು ನಾಲ್ವರು ಪ್ರಯಾಣಿಕರು ಸಜೀವ ದಹನ

- Advertisement -
- Advertisement -

ಕಲಬುರಗಿ :, ಗೂಡ್ಸ್ ಲಾರಿಗೆ ಡಿಕ್ಕಿ ಹೊಡೆದ ಖಾಸಗಿ ಬಸ್ ವೊಂದು ಹೊತ್ತಿ ಉರಿದ ಪರಿಣಾಮ ನಾಲ್ವರು ಪ್ರಯಾಣಿಕರು ಸಜೀವ ದಹನವಾಗಿರುವ ಘಟನೆ ಕಲಬುರಗಿ  ಜಿಲ್ಲೆಯ ಕಮಲಾಪುರ ಹೊರವಲಯದ ಹೆದ್ದಾರಿಯಲ್ಲಿ ನಡೆದಿದೆ.

ಖಾಸಗಿ ಬಸ್ ಗೋವಾ ದಿಂದ ಹೈದರಾಬಾದ್ ಗೆ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಗೂಡ್ಸ್ ಲಾರಿ ಮತ್ತು ಖಾಸಗಿ ಬಸ್ ಮಧ್ಯೆ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಡಿಕ್ಕಿಯಾದ ರಭಸಕ್ಕೆ ಖಾಸಗಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

Latest News

error: Content is protected !!