Sunday, June 7, 2026
Homeಕರಾವಳಿಚಾರ್ಮಾಡಿಯಲ್ಲಿ ಕೃಷಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ಹಿಂಡು: ಲಕ್ಷಾಂತರ ರೂ. ಮೌಲ್ಯದ ಕೃಷಿ ಹಾನಿ

ಚಾರ್ಮಾಡಿಯಲ್ಲಿ ಕೃಷಿ ತೋಟಕ್ಕೆ ಲಗ್ಗೆಯಿಟ್ಟ ಕಾಡಾನೆ ಹಿಂಡು: ಲಕ್ಷಾಂತರ ರೂ. ಮೌಲ್ಯದ ಕೃಷಿ ಹಾನಿ

- Advertisement -
- Advertisement -

ಚಾರ್ಮಾಡಿ: ಗ್ರಾಮದ ಮಠದ ಮಜಲಿನಲ್ಲಿ ಅನಂತ ರಾವ್ ಅವರ ತೋಟಕ್ಕೆ ಕಳೆದ ರಾತ್ರಿ ಕಾಡಾನೆಗಳು ದಾಳಿ ನಡೆಸಿದ್ದು 30 ಅಡಿಕೆ ಮರ ಹಾಗೂ ಒಂದು ಹಲಸಿನ ಮರವನ್ನು ಮುರಿದು ಹಾಕಿವೆ.


ಅನಂತ ರಾವ್ ಅವರ ತೋಟಕ್ಕೆ ಜನವರಿ ಬಳಿಕ ಒಂಟಿ ಸಲಗ ಸಹಿತ ಕಾಡಾನೆಗಳ ಹಿಂಡು ಹತ್ತಕ್ಕಿಂತ ಅಧಿಕ ಬಾರಿ ದಾಳಿ ನಡೆಸಿದ್ದು ಲಕ್ಷಾಂತರ ರೂ. ಮೌಲ್ಯದ ಕೃಷಿ ಹಾನಿ ಉಂಟಾಗಿದೆ.
ರಾತ್ರಿ ಸುಮಾರು 7 ಕಾಡಾನೆಗಳು ದಾಳಿ ನಡೆಸಿದ್ದು, ರಾತ್ರಿ 1 ಗಂಟೆ ಸುಮಾರಿಗೆ ಮನೆಯವರ ಗಮನಕ್ಕೆ ಬಂದಿದೆ.ತತ್‌ಕ್ಷಣ ಸ್ಥಳೀಯರ ಸಹಕಾರದಲ್ಲಿ ಆನೆಗಳ ಹಿಂಡನ್ನು ಓಡಿಸುವ ಕಾರ್ಯ ನಡೆಯಿತು. ಇದರಿಂದ ಹೆಚ್ಚಿನ ಹಾನಿ ಸಂಭವಿಸುವುದು ತಪ್ಪಿದೆ ಎಂದು ತಿಳಿದುಬಂದಿದೆ.

- Advertisement -

Latest News

error: Content is protected !!