Sunday, June 7, 2026
Homeಕರಾವಳಿಸುಳ್ಯ: ಬೆಳ್ಳಾರೆಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳ ಸ್ಫೋಟವಾಗಿ ಯುವತಿ ಅದೃಷ್ಟವಶಾತ್ ಪಾರಾಗಿರುವ ಘಟನೆ ನಡೆದಿದೆ.

ಸುಳ್ಯ: ಬೆಳ್ಳಾರೆಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳ ಸ್ಫೋಟವಾಗಿ ಯುವತಿ ಅದೃಷ್ಟವಶಾತ್ ಪಾರಾಗಿರುವ ಘಟನೆ ನಡೆದಿದೆ.

- Advertisement -
- Advertisement -

ಸುಳ್ಯ: ಬೆಳ್ಳಾರೆಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳ ಸ್ಫೋಟವಾಗಿ ಯುವತಿ ಅದೃಷ್ಟವಶಾತ್ ಪಾರಾಗಿರುವ ಘಟನೆ ನಡೆದಿದೆ.

ಬೆಳ್ಳಾರೆಯ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ಎರಡು ವರ್ಷದ ಹಿಂದೆ ಫ್ಲಿಫ್ ಕಾರ್ಟ್ ನಲ್ಲಿ ರೆಡ್ ಮಿ ನೋಟ್ 8 ಮೊಬೈಲ್ ಖರೀದಿಸಿದ್ದರು. ಎರಡು ದಿನಗಳ ಹಿಂದೆ ಮೊಬೈಲ್ ನಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅದನ್ನು ಮೊಬೈಲ್ ಶಾಪ್ ಒಂದರಲ್ಲಿ ದುರಸ್ಥಿಪಡಿಸಿಕೊಂಡಿದ್ದರು.

ನಿನ್ನೆ ಮಧ್ಯಾಹ್ನ ಯುವತಿ ಬೆಳ್ಳಾರೆಯ ಉಲ್ಲಾಸ್ ಹೋಟೆಲ್ ಗೆ ಊಟಕ್ಕೆಂದು ತೆರಳಿದ್ದರು. ಈ ವೇಳೆ ಮೊಬೈಲ್ ನ್ನು ಊಟದ ಟೇಬಲ್ ಮೇಲಿಟ್ಟು ಗೆಳತಿಯರೊಂದಿಗೆ ಮಾತನಾಡುತ್ತಿದ್ದರು. ಆಗ ಇದ್ದಕ್ಕಿದ್ದಂತೆ ಮೊಬೈಲ್ ಸ್ಫೋಟವಾಗಿ, ಬೆಂಕಿ ಹೊತ್ತಿಕೊಂಡಿದೆ.ಕೂಡಲೇ ಹೋಟೆಲ್ ಮಾಲೀಕ ವಸಂತ್ ಅವರು ಟೇಬಲ್ ನಿಂದ ಮೊಬೈಲ್ ನ್ನು ಕೆಳಕ್ಕೆ ತಳ್ಳಿದ್ದಾರೆ. ಅಷ್ಟರಲ್ಲಾಗಲೇ ಫ್ಲೈವುಡ್ ಟೇಬಲ್ ಸ್ವಲ್ಪ ಸುಟ್ಟು ಹೋಗಿದೆ.

ಯುವತಿ ಮೊಬೈಲ್ ಬಳಕೆ ಮಾಡದೇ ಇದ್ದದ್ದರಿಂದ ಭಾರೀ ಅನಾಹುತವೊಂದು ತಪ್ಪಿದೆ. ಇನ್ನು ಮೊಬೈಲ್ ಫೋನ್ ಹಾಗೂ ಅದರ ಕವರ್ ಸಂಪೂರ್ಣ ಸುಟ್ಟು ಕರಕಲಾದರೂ ಕವರ್ ನಲ್ಲಿದ್ದ ಕೊರಗಜ್ಜನ ಫೋಟೋ ಮಾತ್ರ ಏನೂ ಆಗದೇ ಹಾಗೇ ಇದ್ದದ್ದು ಅಚ್ಚರಿ ಮೂಡಿಸಿದೆ.

- Advertisement -

Latest News

error: Content is protected !!