Saturday, June 27, 2026
Homeಅಪರಾಧವಿಟ್ಲ: ಅನ್ನಭಾಗ್ಯ ಯೋಜನೆ ಅಕ್ಕಿಯ ಅಕ್ರಮ ಸಾಗಾಟ; ಲಾರಿ ಸಹಿತ ಚಾಲಕ ಪೊಲೀಸ್ ವಶಕ್ಕೆ

ವಿಟ್ಲ: ಅನ್ನಭಾಗ್ಯ ಯೋಜನೆ ಅಕ್ಕಿಯ ಅಕ್ರಮ ಸಾಗಾಟ; ಲಾರಿ ಸಹಿತ ಚಾಲಕ ಪೊಲೀಸ್ ವಶಕ್ಕೆ

- Advertisement -
- Advertisement -

ವಿಟ್ಲ: ಅಕ್ರಮವಾಗಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದವಾಹನವನ್ನು ಪತ್ತೆ ಹಚ್ಚಿದ ವಿಟ್ಲ ಠಾಣಾ ಪೊಲೀಸರು ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಬೋಳಂತೂರು ಗ್ರಾಮದ ಎನ್.ಸಿ ರೋಡ್ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.


ಲಾರಿ ಚಾಲಕ ಮಡಿಕೇರಿ ಮೂಲದ ಚಂದ್ರೇಶ್ ಬಂಧಿತ ಆರೋಪಿ, ಅವರು ಬೋಳಂತೂರು ಸಮೀಪದ ನಾರ್ಶ ಎಂಬಲ್ಲಿಗೆ ಲಾರಿಯಲ್ಲಿ ಅಕ್ರಮವಾಗಿ ಸುಮಾರು 15 ಟನ್ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ವಿಟ್ಲ ಠಾಣಾ ಪೊಲೀಸರ ತಂಡ ಆರೋಪಿ ಮತ್ತು 313 ಗೋಣಿಗಳ 15 ಟನ್ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.


ಈ ಬಗ್ಗೆ ಪ್ರಭಾರ ಆಹಾರ ನಿರೀಕ್ಷಕ ಪ್ರಶಾಂತ್ ಶೆಟ್ಟಿ ಅವರು ಠಾಣೆಗೆ ನೀಡಿದ ದೂರಿನಂತೆ ಬೋಳಂತೂರು ಗ್ರಾಮದ ನ್ಯಾಯಬೆಲೆ ಅಂಗಡಿ ಸಂಖ್ಯೆ 68ರ ಮಾಲಕ ಬೋಳಂತೂರು ಕಲ್ಪನೆ ನಿವಾಸಿ ಅಬೂಬಕ್ಕರ್ ಬಿ.ಹಾಗೂ ನ್ಯಾಯಬೆಲೆ ಅಂಗಡಿ ಸಂಖ್ಯೆ 105ರ ಮಾಲಕ ಹಮೀದ್ ನಾರ್ಶ್ ಕೋಲ್ನಾಡುರವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


ವಶಕ್ಕೆ ಪಡೆದ ಲಾರಿ ಮತ್ತು ಅಕ್ಕಿಯ ಮೌಲ್ಯ 23 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

- Advertisement -

Latest News

error: Content is protected !!